ಗಲ್ಪ್ ಆಫ್ ಆಡೆನ್‌ನಲ್ಲಿ ಜನವರಿ 1ರಂದು 28 ಸಿಬ್ಬಂದಿಗಳನ್ನೊಳಗೊಂಡ ಈಜಿಪ್ಟ್ ವಾಣಿಜ್ಯ ಹಡಗನ್ನು ಸೋಮಾಲಿಯಾ ಕಡಲ್ಗಳ್ಳರು ಅಪಹರಿಸಿದ್ದು, ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದೀಗ ಒತ್ತೆ ಹಣ ಪಡೆದ ಬಳಿಕ ಹಡಗನ್ನು ಸುರಕ್ಷಿತವಾಗಿ ಬಂಧಮುಕ್ತಗೊಳಿಸುವ ಸಾಧ್ಯತೆಯಿದೆ ಎಂದು ಶುಕ್ರವಾರ ವರದಿಯಾಗಿದೆ. ಸುಮಾರು ಮೂರು ಮಿಲಿಯನ್ ಡಾಲರ್ ಬೇಡಿಕೆಯನ್ನಿಟ್ಟಿದ್ದರು ಎಂದು ತಿಳಿದು ಬಂದಿದೆ.
|