ಕಳೆದ 20 ವರ್ಷಗಳಲ್ಲೇ ಬ್ರಿಟನ್‌ನಲ್ಲಿ ಅತ್ಯಧಿಕ ಹಿಮಪಾತವಾಗಿದ್ದು, ಬ್ರಿಟನ್ ಜನಜೀವನ ಅಸ್ತವ್ಯಸ್ತಗೊಂಡಿದೆ. ಇಲ್ಲಿನ ಡೆವನ್ ಪ್ರದೇಶದಲ್ಲಿ 200ರಷ್ಟು ಕಾರುಗಳು ಹಿಮಾವೃತವಾಗಿದ್ದಲ್ಲದೆ ಸುಮಾರು 800 ಶಾಲೆಗಳಲ್ಲಿ ರಜೆ ಸಾರಲಾಗಿದೆ. ಲಂಡನ್‌ನ ಉತ್ತರ ಭಾಗಗಳಲ್ಲಿಯೂ ಹಿಮಪಾತ ತೀವ್ರಗೊಂಡಿದ್ದು, ಬ್ರಿಸ್ಟಲ್ ವಿಮಾನ ನಿಲ್ದಾಣದ ಕಾರ್ಯಚಟುವಟಿಕೆ ರದ್ದುಗೊಳಿಸಲಾಗಿದೆ. |