ಮುಂಬೈಗೆ ನಡೆದ ಉಗ್ರರ ದಾಳಿ ಸಂಬಂಧ ಪಾಕಿಸ್ತಾನದ ಇಂಟರ್ ಇಂಟೆಲಿಜೆನ್ಸ್ ಸರ್ವಿಸಸ್(ಐಎಸ್‌ಐ) ಕೈವಾಡವಿದೆ ಎಂಬ ಭಾರತದ ಆರೋಪದ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ನಿವೃತ್ತ ಜನರಲ್ ಪರ್ವೇಜ್ ಮುಶ್ರರಫ್ ಅವರು 26/11 ದಾಳಿ ಹಿಂದೆ ಪಾಕ್‌ನ ಐಎಸ್‌ಐ ಭಾಗೀಧಾರಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಯುಸ್ ಮತ್ತು ಭಾರತದಲ್ಲಿನ ಸಿಐಎ ಮತ್ತು ಆರ್‌ಎಡಬ್ಲ್ಯುಗಳಂತೆ ಐಎಸ್‌ಐ ಕಾರ್ಯಚರಿಸುತ್ತಿದೆ ಎಂಬ ಮುಶ್ರರಫ್‌ರ ಹೇಳಿಕೆಯನ್ನು ಡೈಲಿ ಟೈಮ್ಸ್ ವರದಿ ಮಾಡಿದೆ. |