ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಬಾಂಗ್ಲಾ ಮೂಲದ ಉಗ್ರಗಾಮಿ ಸಂಘಟನೆಗಳ ಕೈವಾಡ ಇರುವುದಾಗಿ ಆರೋಪಿಸಿರುವ ಪಾಕಿಸ್ತಾನ ತನಿಖಾ ಸಂಸ್ಥೆಯ ಆರೋಪವನ್ನು ಬಾಂಗ್ಲಾ ತಿರಸ್ಕರಿಸಿದೆ.
ತೀವ್ರವಾದಿಗಳು ಮತ್ತು ಭಯೋತ್ಪಾದಕರಿಗೆ ಯಾವುದೇ ಸೀಮೆ, ದೇಶದ ಭೇದಭಾವವಿಲ್ಲ. ನಿಜಕ್ಕೂ ಪಾಕಿಸ್ತಾನದ ಹೇಳಿಕೆ ಆಘಾತವನ್ನುಂಟು ಮಾಡುತ್ತಿದೆ ಎಂದು ಬಾಂಗ್ಲಾ ಗೃಹಸಚಿವ ಸಾಹರಾ ಖಾತುನ್ ತಿಳಿಸಿರುವುದಾಗಿ ಡೈಲಿ ಸ್ಟಾರ್ ವರದಿ ಹೇಳಿದೆ.
ಭಯೋತ್ಪಾದನೆಯನ್ನು ಮಟ್ಟ ಹಾಕುವಲ್ಲಿ ನಮಗೆ ನಿಮ್ಮ ಪೂರ್ಣ ಸಹಕಾರದ ಅಗತ್ಯವಿದೆ ಹಾಗೂ ನಿಮ್ಮ ಸಲಹೆ ಕೂಡ. ನಾನು ನಿಮಗೆ ಭಾಷೆ ನೀಡುತ್ತೇನೆ, ಉಗ್ರಗಾಮಿ ಚಟುವಟಿಕೆಯನ್ನು ಮಟ್ಟಹಾಕುವುದಾಗಿ ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು.
ಕಳೆದ ವರ್ಷ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ಬಾಂಗ್ಲಾದೇಶದ ಉಗ್ರರ ಕೈವಾಡ ಇರುವ ಬಗ್ಗೆ ಪಾಕ್ ತನಿಖಾ ಸಂಸ್ಥೆ ತಳುಕು ಹಾಕಿರುವ ಸಾಧ್ಯತೆ ಇರುವುದಾಗಿ ಪಾಕಿಸ್ತಾನದ ಮಾಧ್ಯಮಗಳ ವರದಿ ತಿಳಿಸಿದ್ದವು. ಅದಕ್ಕೆ ಪ್ರತಿಕ್ರಿಯೆಯಾಗಿ ಬಾಂಗ್ಲಾ ಈ ಹೇಳಿಕೆಯನ್ನು ನೀಡಿದೆ. |