ಗೃಹಬಂಧನದಲ್ಲಿದ್ದ ಪಾಕಿಸ್ತಾನದ ಕಳಂಕಿತ ಪರಮಾಣು ವಿಜ್ಞಾನಿ ಎ.ಕ್ಯೂ.ಖಾನ್ ಅವರ ಬಿಡುಗಡೆಯನ್ನು ದುರದೃಷ್ಟಕರ ಎಂದು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ ಗೋರ್ಡನ್ ಡೂಗ್ವಿಡ್ ಖೇದ ವ್ಯಕ್ತಪಡಿಸಿದ್ದಾರೆ.
ಖಾನ್ ಅವರ ಬಿಡುಗಡೆಯಿಂದ ಪರಮಾಣು ಕಳ್ಳ ಸಾಗಣೆಗೆ ಅಪಾಯ ಜಾಗತಿಕವಾಗಿ ಉಳಿಯುತ್ತದೆ ಎಂದಿರುವ ಅವರು, ಈ ಸಂಬಂಧದಲ್ಲಿ ಅಮೆರಿಕದ ನಿಲುವು ಪಾಕಿಸ್ತಾನಕ್ಕೆ ತಿಳಿದಿದೆ ಎಂದು ಹೇಳಿದರು.
ಎ.ಕ್ಯೂ.ಖಾನ್ ಮತ್ತು ಅವರ 12ಮಂದಿ ಸಹೋದ್ಯೋಗಿಗಳು ಹಾಗೂ ಮೂರು ಸಂಸ್ಥೆಗಳು ಅಮೆರಿಕ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳೊಂದಿಗೆ ವ್ಯವಹಾರ ನಡೆಸುವುದನ್ನು ಕಳೆದ ತಿಂಗಳು ಅಮೆರಿಕ ನಿರ್ಬಂಧಿಸಿತ್ತು.
ಲಿಬಿಯಾ ಮತ್ತು ಕೊರಿಯಾಗಳಂತಹ ಅಪಾಯಕಾರಿ ದೇಶಗಳಿಗೆ ಪರಮಾಣು ರಹಸ್ಯಗಳನ್ನು ನೀಡಿದ ಆರೋಪದಲ್ಲಿ ಖಾನ್ ಅವರನ್ನು ಫೆಬ್ರುವರಿ 2004ರಲ್ಲಿ ಗೃಹ ಬಂಧನಕ್ಕೆ ಒಳಪಡಿಸಲಾಗಿತ್ತು. |