ಮನೌಸ್ ನಗರದತ್ತ ಪ್ರಯಾಣಿಸುತ್ತಿದ್ದ ಸಣ್ಣ ವಿಮಾನವೊಂದು ಬ್ರೆಜಿಲ್ ಅಮೆಜಾನ್‌ನಲ್ಲಿ ಅಪಘಾತಕ್ಕೀಡಾಗಿ ಕನಿಷ್ಠ 16 ಜನರು ಸತ್ತಿದ್ದಾರೆಂದು ಶಂಕಿಸಲಾಗಿದೆ. ವಿಮಾನದಲ್ಲಿ 20 ಮಂದಿ ಪ್ರಯಾಣಿಸುತ್ತಿದ್ದು, ಉಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈಜುಗಾರರು 6 ದೇಹಗಳನ್ನು ಪತ್ತೆಹಚ್ಚಿದ್ದಾರೆ. ದಟ್ಟವಾದ ಕಾಡಿನಲ್ಲಿ ಎರಡು ನಗರಗಳ ನಡುವೆ ಪ್ರಯಾಣಿಕರನ್ನು ಸಾಗಿಸಲು ಈ ವಿಮಾನವನ್ನು ಏರ್ ಟ್ಯಾಕ್ಸಿ ರೀತಿಯಲ್ಲಿ ಬಳಸಲಾಗುತ್ತಿತ್ತೆಂದು ಹೇಳಲಾಗಿದೆ.
ಮನೌಸ್‌ಗೆ 80ಕಿಮೀ ದೂರದಲ್ಲಿರುವ ಮನಾಕಾಪುರಿ ನದಿಗೆ ವಿಮಾನವು ಉರುಳಿಬಿದ್ದು ಅಪಘಾತ ಸಂಭವಿಸಿದೆಯೆಂದು ರಾಜ್ಯಸರ್ಕಾರದ ವಕ್ತಾರ ತಿಳಿಸಿದರು.ವಿಮಾನದಿಂದ ನಾಲ್ವರು ಹೆಚ್ಚು ಗಾಯಗಳಾಗದೇ ಪಾರಾಗಿದ್ದನ್ನು ಶೋಧಕರು ಪತ್ತೆಹಚ್ಚಿದರೆಂದು ವಕ್ತಾರ ಹೇಳಿದರು.
ನದಿಯ ನೀರಿನಲ್ಲಿ ಮುಳುಗಿದ ವಿಮಾನದಲ್ಲಿ ಈಜುಗಾರರು 6 ದೇಹಗಳನ್ನು ಪತ್ತೆಹಚ್ಚಿದ್ದು, ಇನ್ನಷ್ಟು ದೇಹಗಳಿಗಾಗಿ ಶೋಧ ನಡೆಸಿದ್ದಾರೆಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ.
|