ಆಗ್ನೇಯ ಆಸ್ಟ್ರೇಲಿಯಾದಲ್ಲಿ ಬಲವಾಗಿ ಬೀಸುತ್ತಿರುವ ಗಾಳಿಯಿಂದ ಕಾಡ್ಗಿಚ್ಚು ಭೀಕರವಾಗಿ ಹಬ್ಬುತ್ತಿದ್ದು, ಬಲಿಯಾದವರ ಸಂಖ್ಯೆ 128ಕ್ಕೆ ಏರಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕನಿಷ್ಠ 640 ಮನೆಗಳು ಬೆಂಕಿಗೆ ಆಹುತಿಯಾಗಿವೆ. ಕಳೆದ 25 ವರ್ಷಗಳಲ್ಲೇ ಸಂಭವಿಸಿರುವ ಈ ದುರಂತ ಅತ್ಯಂತ ಭೀಕರ ಕಾಳ್ಗಿಚ್ಚು ಎಂದು ಹೇಳಲಾಗಿದ್ದು, ಆಸೀಸ್ ಪ್ರಧಾನಿ ಕೆವಿನ್ ರುಡ್ ಇದನ್ನು 'ನರಕ ರೌದ್ರ' ಎಂದು ವರ್ಣಿಸಿದ್ದಾರೆ. |