ಅಫ್ಘಾನ್‌ಗೆ ಹೊಂದಿಕೊಂಡಿರುವ ವಾಯುವ್ಯ ಪಾಕಿಸ್ತಾನದ ಉತ್ತರ ವಾಜ್‌ರಿಸ್ತಾನ್ ಆದಿವಾಸಿ ಪ್ರದೇಶದಿಂದ 50ಕಿ.ಮೀ. ದೂರದಲ್ಲಿರುವ ಬರಾನ್ ಪುಲ್ ಭಾಗದಲ್ಲಿ ಸೋಮವಾರ ಪಾಕ್ ಗಡಿ ನಿಯಂತ್ರಣ ಸೇನೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಐದು ಮಂದಿ ಸಾವಿಗೀಡಾಗಿದ್ದು, 17 ಮಂದಿ ಗಾಯಗೊಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಗಾಯಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. |