ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸೌದಿ ಅರೆಬಿಯಾದ ಆಹ್ವಾನದ ಮೆರೆಗೆ ಚೀನಾ ಅಧ್ಯಕ್ಷ ಹೂ ಜಿಟಾಂವೊ ಫೆಬ್ರವರಿ 10ರಿಂದ ಎರಡು ದಿನಗಳ ಕಾಲ ಸೌದಿ ಅರೆಬಿಯಾ ಸಂದರ್ಶನವನ್ನು ನಡೆಸಲಿದ್ದಾರೆ. ಚೀನಾ ಅಧ್ಯಕ್ಷರ ಭೇಟಿಯ ವೇಳೆ ಸೌದಿ ದೊರೆ ಅಬ್ದುಲ್ ಅಜೀಜ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಕಳೆದ ಮೂರು ವರ್ಷಗಳೆಡೆ ಚೀನಾ ಅಧ್ಯಕ್ಷನ ಇದು ಎರಡನೇ ಭೇಟಿಯಾಗಿದೆ. ಮಾತುಕತೆ ವೇಳೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. |