ಎರಡು ದಿನದ ಪಾಕಿಸ್ತಾನ ಭೇಟಿ ಕೈಗೊಂಡಿರುವ ಅಮೆರಿಕ ವಿಶೇಷ ರಾಯಭಾರಿ ರಿಚರ್ಡ್ ಹೂಲ್‌ಬ್ರೂಕ್ ಇಂದು ಪಾಕಿಸ್ತಾನದಲ್ಲಿ ಬಂದಿಳಿಯಲಿದ್ದಾರೆ. ರಿಚರ್ಡ್ ಭೇಟಿ ವೇಳೆ ಅಧ್ಯಕ್ಷ ಪಾಕಿಸ್ತಾನ ಆಸಿಫ್ ಅಲಿ ಜರ್ದಾರಿ, ಪ್ರಧಾನಿ ಯೂಸಫ್ ರಾಜಾ ಗಿಲಾನಿ, ವಿದೇಶಾಂಗ ಸಚಿವ ಶಾಹಾ ಮಹಮ‌್ಮೂದ್ ಖುರೇಶಿ ಮತ್ತು ಇತರ ಉನ್ನತ ಅಧಿಕಾರಿಗಳೊಂದಿಗೆ ಪ್ರತ್ಯೇಕವಾದ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ಜಿಯೋ ಟಿ. ವಿ. ವರದಿ ಮಾಡಿದೆ. |