ಆಸ್ಟ್ರೇಲಿಯಾದ ಚರಿತ್ರೆಯಲ್ಲಿ ಅತೀ ದೊಡ್ಡದೆಂದು ಪರಿಗಣಿಸಲ್ಪಟ್ಟಿರುವ ಭೀಕರ ಕಾಡ್ಗಿಚ್ಚಿನಿಂದ ದಕ್ಷಿಣ ಆಸ್ಟ್ರೇಲಿಯಾದಲ್ಲಿ 170ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಭೀಕರ ಕಾಳ್ಗಿಚ್ಚಿನಿಂದ ನೂರಾರು ಮನೆಗಳು, ಅರಣ್ಯಗಳು ಮತ್ತು ಕೃಷಿಭೂಮಿ ಅಗ್ನಿಗಾಹುತಿಯಾಗಿದ್ದು, ಅಪಾರ ನಾಶ-ನಷ್ಟವುಂಟಾಗಿದೆ. ವಿಕ್ಟೋರಿಯಾ ರಾಜ್ಯದ ಈಶಾನ್ಯ ಭಾಗ ಸಂಪೂರ್ಣವಾಗಿ ನಾಶವಾಗಿದೆ. ಮೆಲ್ಬರ್ನ್‌ನ ದಕ್ಷಿಣ ನಗರ ಪ್ರದೇಶದಲ್ಲಿ 750ಕ್ಕಿಂತ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, 5000ಕ್ಕಿಂತ ಹೆಚ್ಚು ಜನರು ತಮ್ಮ ವಸತಿಗಳನ್ನು ಕಳಕೊಂಡಿದ್ದು, ಸುಮಾರು 1,100 ಮೈಲು ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಆಸ್ಟ್ರೇಲಿಯಾಕ್ಕೆ ನೆರವು ನೀಡಲು ಮುಂದಾಗಿದ್ದಾರೆ. |