ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಮುಂಬಯಿ ದಾಳಿ ತನಿಖೆ ವಿಳಂಬ: ಪಾಕ್‌ಗೆ ಮತ್ತೊಂದು ಅಸ್ತ್ರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬಯಿ ದಾಳಿ ತನಿಖೆ ವಿಳಂಬ: ಪಾಕ್‌ಗೆ ಮತ್ತೊಂದು ಅಸ್ತ್ರ
ಮುಂಬಯಿ ದಾಳಿ ನಡೆದು 75 ದಿನಗಳೇ ಸಂದರೂ, ಒಂದು ಹಿಡಿ ತನಿಖಾ ವರದಿ ನೀಡಲು ವಿಫಲವಾಗಿರುವ ಪಾಕಿಸ್ತಾನ, ದಿನಕ್ಕೊಂದು ಸುಳ್ಳಿನ ಕಂತೆ ಪೋಣಿಸುತ್ತಲೇ ಇದ್ದು, ಇದೀಗ ಅದಕ್ಕೆ ಮತ್ತೊಂದು ಅಸ್ತ್ರ ಸಿಕ್ಕಿದೆ. ಮುಂಬಯಿ ದಾಳಿಗಾಗಿ ಉಗ್ರಗಾಮಿಗಳಿಗೆ 'ಭಾರತದೊಳಗಿರುವ ಶಕ್ತಿಗಳೇ' ಸಹಾಯ ಮಾಡಿದ್ದು, ಅವರ ತನಿಖೆಗಾಗಿ ತಮಗೆ ಅವಕಾಶ ನೀಡುವಂತೆ ಕೋರಿಕೊಳ್ಳಲಿದೆ.

'ಭಾರತದೊಳಗಿನವರ ಸಹಾಯವಿಲ್ಲದೆ, ಮುಂಬಯಿ ಘಟನೆ ನಡೆಯುವುದು ಸಾಧ್ಯವೇ ಇಲ್ಲ ಎಂಬ ಬಗ್ಗೆ ಪಾಕಿಸ್ತಾನಿ ಭದ್ರತಾ ಏಜೆನ್ಸಿಗಳು ಬಲವಾಗಿ ನಂಬಿವೆ' ಎಂದು ಅಧಿಕೃತ ಮೂಲಗಳು ಡಾನ್ ಪತ್ರಿಕೆಯ ವರದಿಯನ್ನು ಉಲ್ಲೇಖಿಸಿ ತಿಳಿಸಿವೆ. ಮುಂಬಯಿ ದಾಳಿಗಳಲ್ಲಿ ಭಾಗಿಯಾಗಿದ್ದ ಉಗ್ರಗಾಮಿಗಳ ಡಿಎನ್ಎ ಮಾದರಿಗಳನ್ನು ಪಾಕಿಸ್ತಾನ ಕೇರಳಲಿದೆ ಮತ್ತು ಇಂಟರ್ನೆಟ್ ಮೂಲಕ ಅವರು ಯಾರನ್ನು ಸಂಪರ್ಕಿಸಿದ್ದರು ಎಂಬ ಕುರಿತು ಮತ್ತಷ್ಟು ಮಾಹಿತಿ ಯಾಚಿಸಲಿದೆ ಎಂದು ಪತ್ರಿಕೆ ವರದಿ ಮಾಡಿದ್ದು, ಒಟ್ಟಿನಲ್ಲಿ ತನಿಖೆಯನ್ನು ಮತ್ತಷ್ಟು ವಿಳಂಬ ಮಾಡುವಲ್ಲಿ ಪಾಕಿಸ್ತಾನ ಯಶಸ್ವಿಯಾಗುತ್ತಿದ್ದು, ಭಾರತ ಸರಕಾರವು ಪಾಕಿಸ್ತಾನದಿಂದ ಸೂಕ್ತ ಪ್ರತ್ಯುತ್ತರ ಪಡೆಯುವಲ್ಲಿ ವಿಫಲವಾಗುತ್ತಿದೆಯೇ ಎಂಬ ಸಂದೇಹ ಮೂಡಿದೆ.

ಮುಂಬಯಿ ದಾಳಿ ಕುರಿತು ಪಾಕಿಸ್ತಾನ ನಡೆಸಿದ ತನಿಖಾ ವರದಿಯನ್ನು ಮಂಗಳವಾರ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಾಮರ್ಶಿಸಲಾಗಿ, ತನಿಖೆ ಪೂರ್ಣಗೊಳಿಸಲು ಮತ್ತಷ್ಟು ಕಾಲಾವಕಾಶ ಬೇಕು, ಇನ್ನಷ್ಟು ಮಾಹಿತಿ ಬೇಕು ಎಂದು ತೀರ್ಮಾನಿಸಿ ಕೈತೊಳೆದುಕೊಳ್ಳಲಾಗಿತ್ತು.

ಈ ವರದಿಯಲ್ಲಿ ಪಾಕ್ ಭಯೋತ್ಪಾದಕರು ಎನ್ನಲಾದವರ ಡಿಎನ್ಎ ಸ್ಯಾಂಪಲ್ ದೊರೆತರೆ ಅದನ್ನು, ಅವರ ಕುಟುಂಬಿಕರೇನಾದರೂ ಪಾಕಿಸ್ತಾನದಲ್ಲಿ ಇದ್ದಾರೆಂದಾದರೆ, ಅವರ ಡಿಎನ್ಎ ಜೊತೆ ಹೋಲಿಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಮಿತಿ ನಿರ್ಧರಿಸಿತ್ತು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಅಂತೆಯೇ, ಉಗ್ರರು ಬಳಸಿದ ಆಯುಧಗಳು, ಅವರು ಮಾಡಿದ ಮೊಬೈಲ್ ಫೋನ್ ಕರೆಗಳ ಮಾಹಿತಿ, ಇ-ಮೇಲ್ ಕಳುಹಿಸಲಾಗಿದ್ದ ಐಪಿ ವಿಳಾಸಗಳನ್ನು ನೀಡಬೇಕು ಎಂದು ಪಾಕಿಸ್ತಾನವು ವರದಿಯಲ್ಲಿ ಕೋರಲಿದ್ದು, ಈ ವರದಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಇಡೀ ವಿಶ್ವವೇ 'ಕಾತರದ ಕಣ್ಣುಗಳಿಂದ' ಕಾಯುತ್ತಿದೆ. ಇದರಲ್ಲಿ ಇನ್ನೂ ಎಂತೆಂತಹ ಸುಳ್ಳುಗಳಿರಬಹುದು ಎಂಬುದು ತಿಳಿಯಬೇಕಿದೆ.

ಇನ್ನೆರಡು ದಿನಗಳಲ್ಲಿ ಉಗ್ರಗಾಮಿಯೆನ್ನಲಾಗುತ್ತಿರುವ ಬಂಧಿತ ವ್ಯಕ್ತಿ ಅಜ್ಮಲ್ ಅಮೀರ್ ಕಸಬ್ ಹಾಗೂ ಆತನ ಗೆಳೆಯರ ವಿರುದ್ಧ ಎಫ್ಐಆರ್ ದಾಖಲಿಸಿ, ಪಾಕಿಸ್ತಾನೀ ನ್ಯಾಯಾಂಗ ವಿಧಿಗಳ ಪ್ರಕಾರ ಅವರನ್ನು ವಿಚಾರಣೆಗೆ ಗುರಿಪಡಿಸುವ ನಿರ್ಧಾರವನ್ನು ಪಾಕಿಸ್ತಾನ ಪ್ರಕಟಿಸಲಿದೆ. ಮತ್ತಷ್ಟು ಮಾಹಿತಿ ಕೋರಿ ಈಗಾಗಲೇ ಭಾರತಕ್ಕೆ ಪತ್ರ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆತ್ಮಾಹುತಿ ದಾಳಿಗೆ 4 ಅಮೆರಿಕನ್ ಸೈನಿಕರು ಬಲಿ
ಆಸ್ಟ್ರೇಲಿಯಾ ಭೀಕರ ಕಾಡ್ಗಿಚ್ಚಿನಲ್ಲಿ 170ಮಂದಿ ಬಲಿ
ಪಾಕ್‌ ಉಗ್ರರಿಗೆ ತಕ್ಕ ಪಾಠ ಕಲಿಸುತ್ತೇವೆ: ಒಬಾಮಾ
ಶೂ ಎಸೆದ ವಿದ್ಯಾರ್ಥಿಗೆ ಕ್ಷಮೆ ನೀಡಿದ ಚೀನಾ ಪ್ರಧಾನಿ
ಲಂಕಾ: ಆತ್ಮಾಹುತಿ ದಾಳಿಗೆ 23 ಬಲಿ
ಎಂಟು ಮಕ್ಕಳ ತಾಯಿಯ ಕುಟುಂಬದಲ್ಲಿ ಬಿರುಕು!