ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಡಳಿತವು ಪಾಕ್ ಮತ್ತು ಅಫ್ಘಾನ್ ದೇಶದೊಂದಿಗಿನ ಕಾರ್ಯನೀತಿಯಲ್ಲಿ ಬದಲಾವಣೆ ತರುವ ಹಿನ್ನಲೆಯಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಅವರು ಫೆಬ್ರವರಿ 22ರಿಂದ ಒಂದು ವಾರಗಳ ಕಾಲ ಅಮೆರಿಕ ಸಂದರ್ಶನ ಕೈಗೊಳ್ಳಲಿದ್ದಾರೆ. ಕಯಾನಿ ಅಮೆರಿಕ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಸಹಿತ ಪ್ರಮುಖ ನಾಯಕರನ್ನು ಭೇಟಿಯಾಗಲಿದ್ದಾರೆ. ಪಾಕ್ ಸೇನಾ ಮುಖ್ಯಸ್ಥ ಹುದ್ದೆಯನ್ನು ಮಾಜಿ ಪಾಕ್ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ತೊರೆದ ಹಿನ್ನಲೆಯಲ್ಲಿ ಐಎಸ್ಐನ ಮಾಜಿ ಮುಖ್ಯಸ್ಥರಾಗಿದ್ದ ಕಯಾನಿ ಅವರಿಗೆ ಸೇನಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ದರು.
|