ಅಫ್ಘಾನಿಸ್ತಾನದ ಯುದ್ಧಪೀಡಿತ ಪ್ರದೇಶದಿಂದ ಅಮೆರಿಕ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಸೂಚನೆಯನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ನೀಡಿದ್ದಾರೆ.
ಅಫ್ಘಾನಿಸ್ತಾನದ ಹಮೀದ್ ಕರ್ಜಾಯ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ ಅವರು, ಅಫ್ಘಾನ್ ವಲಯದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವಿಶದಿಕರಿಲಾಗುವುದು ಎಂದು ಹೇಳಿದ್ದಾರೆ.
ಅಲ್ ಖಾಯಿದಾ ಹಾಗೂ ತಾಲಿಬಾನ್ ಪೀಡನೆ ಇರುವ ಅಫ್ಘಾನಿಸ್ತಾನದಿಂದ ಪಡೆಗಳನ್ನು ಹಿಂದಕ್ಕೆ ಪಡೆಯುವುದು ಯಾವಾಗ ಎಂಬುದರ ಕುರಿತು ಅಮೆರಿಕದ ಸೇನಾ ಪಡೆಯ ಮುಖ್ಯ ಕಮಾಂಡರ್ ಸಹ ಆಗಿರುವ ಒಬಾಮ ಅವರು ಸ್ಪಷ್ಟಪಡಿಸಿಲ್ಲ.
ಅಧ್ಯಕ್ಷ ಒಬಾಮ ಅವರು ಶ್ವೇತಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಫ್ಘಾನಿಸ್ತಾನ ಕುರಿತ ಪಶ್ನೆಗಳಿಗೆ ಪ್ರತಿಕ್ರಿಯಿಸಿ, ಅಮೆರಿಕ ಪಡೆಗಳನು ವಿಶೇಷ ಕಾರ್ಯಗಳನ್ನು ನಿರ್ವಹಿಸಿದ್ದು, ಅಲ್ಲಿನ ಅಮೆರಿಕ ರಾಯಭಾರಿ ಕೂಡ ಉತ್ತಮ ರಾಜತಾಂತ್ರಿಕ ನಿರ್ವಹಣೆ ತೋರಿದ್ದಾರೆ ಎಂದು ಶ್ಲಾಘಿಸಿದರು. |