ನೇಪಾಳ ಪ್ರಧಾನಮಂತ್ರಿ ಪುಷ್ಪ ಕಮಾಲ್ ದಹಾಲ್ ಆಲಿಯಾಸ್ ಪ್ರಚಂಡ ಅವರ ಖಾಸಗಿ ಕಾರ್ಯದರ್ಶಿಯನ್ನು ಅಪರಿಚಿತ ವ್ಯಕ್ತಿಯೊಬ್ಬ ಗುಂಡು ಹೊಡೆದಿರುವ ಘಟನೆ ಸೋಮವಾರ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿ ಸೆಂಟ್ರಲ್ ಕಮಿಟಿಯ ಸದಸ್ಯರಾದ ಶಕ್ತಿ ಬಹಾದ್ದೂರ್ ಬಾಸ್‌ನೆಟ್ ಅವರು ಮನೆಗೆ ಹಿಂದಿರುಗುತ್ತಿದ್ದ ವೇಳೆಯಲ್ಲಿ ಆಗಂತುಕನೊಬ್ಬ ಗುಂಡು ಹಾರಿಸಿದ ಪರಿಣಾಮ ಕಾಲಿಗೆ ಗಾಯವಾಗಿರುವುದಾಗಿ ಹೇಳಿದ್ದಾರೆ.
ಕೂಡಲೇ ಅವರನ್ನು ಬಿ ಆಂಡ್ ಬಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಚಂಡ ಅವರ ಮಾಧ್ಯಮ ಸಲಹೆಗಾರ ಓಂ ಶರ್ಮಾ ಅವರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ. ಪ್ರಚಂಡ ಅವರ ಕ್ಯಾಬಿನೆಟ್‌ನಲ್ಲಿ ಬಹಾದ್ದೂರ್ ಪ್ರಮುಖ ವ್ಯಕ್ತಿಯಾಗಿದ್ದಾರೆ. |