ದಕ್ಷಿಣ ನಗರ ಅರೆಖ್ವಿಪಾ ಮತ್ತು ಜೂಲಿಯಾಕ ಪ್ರಧಾನ ರಸ್ತೆ ಸೇರುವ ಟ್ರಾಫಿಕ್ ಪ್ರದೇಶದಲ್ಲಿ ಎರಡು ಬಸ್ ಹಾಗೂ ಟ್ರಕ್ ಪರಸ್ಪರ ಢಿಕ್ಕಿಯಾಗಿ ಪರಿಣಾಮ ಸಂಭವಿಸಿದ ಭೀಕರ ಅಫಘಾತದಲ್ಲಿ ಕನಿಷ್ಠ 20 ಮಂದಿ ಬಲಿಯಾಗಿದ್ದು, 40 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪೆರು ರಾಜ್ಯದಲ್ಲಿ 2008ರಲ್ಲಿ ಅಪಘಾತಕ್ಕೆ 875 ಮಂದಿ ಬಲಿಯಾಗಿದ್ದು, 5,307ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ. |