ಇರಾನ್ ಅಧ್ಯಕ್ಷ ಮಹಮ್ಮದ್ ಅಹ್ಮದಿನೆಜದ್ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮರ ನಿಲುವನ್ನು ಸ್ವಾಗತಿಸುತ್ತಾ ಸಂಧಾನ ಮಾತುಕತೆಗೆ ಇರಾನ್ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಬರಾಕ್ ಸೋಮವಾರ ನಡೆಸಿದ ಪ್ರಥಮ ಪತ್ರಕರ್ತ ಸಮ್ಮೇಳನದಲ್ಲಿ ಇರಾನ್ ದೇಶದೊಂದಿಗಿನ ಮಾತುಕತೆಗೆ ಅಮೆರಿಕ ಸಿದ್ಧವೆಂದು ತಿಳಿಸಿದ ಹಿನ್ನಲೆಯಲ್ಲಿ ಇರಾನ್ ಅಧ್ಯಕ್ಷರು ಹೇಳಿಕೆಯನ್ನು ನೀಡಿದ್ದು, ಮಾತುಕತೆಯು ಸಮಾನತೆ ಹಾಗೂ ನಿಷ್ಪಕ್ಷದಿಂದ ಕೂಡಿರಬೇಕು ಎಂದಿದ್ದಾರೆ. |