ಅಫ್ಘಾನಿಸ್ತಾನದ ರಾಜಧಾನಿಯಲ್ಲಿ ಬುಧವಾರ ಬೆಳಿಗ್ಗೆ ತಾಲಿಬಾನ್ ಉಗ್ರರು ಏಕಕಾಲದಲ್ಲಿ ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 12ಜನರು ಸಾವನ್ನಪ್ಪಿದ್ದು, ಏಳು ಮಂದಿ ಆತ್ಮಹತ್ಯಾ ದಾಳಿಕೋರರು ಸಾವಿಗೀಡಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಉತ್ತರ ಭಾಗದಲ್ಲಿನ ಬಂಧೀಖಾನೆ ನಿರ್ದೇಶನಾಲಯದ ಸಮೀಪ ಅವಳಿ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ನಾಲ್ಕರಿಂದ ಐದು ಮಂದಿ ನಾಗರಿಕರು ಮತ್ತು ಪೊಲೀಸ್ ಸಾವನ್ನಪ್ಪಿರುವುದಾಗಿ ಆಂತರಿಕ ಸಚಿವಾಲಯ ಹೇಳಿದೆ.
ನಿರ್ದೇಶನಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಐದು ಮಂದಿ ಈ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ಮತ್ತೊಂದು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಬಲಿಯಾಗಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ. ಇದರಲ್ಲಿ ಗುಪ್ತಚರ ಇಲಾಖೆ ನೌಕರರು ಮತ್ತು ಪೊಲೀಸರು ಕೂಡ ಸೇರಿದ್ದಾರೆ.
ಈ ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ನಾಲ್ಕು ಮಂದಿ ಶಸ್ತ್ರ ಸಜ್ಜಿತ ಆತ್ಮಹತ್ಯಾ ಬಾಂಬರ್‌ಗಳು ಸಾವನ್ನಪ್ಪಿದ್ದಾರೆ. |