ಜಿಂಬಾಬ್ವೆಯ ವಿರೋಧ ಪಕ್ಷದ ನಾಯಕ ಮೋರ್ಗನ್ ಸಾವಂಗಿರಿ ಅವರು ರಾಜಕೀಯ ವೈರಿ ಜಿಂಬಾಬ್ವೆ ಅಧ್ಯಕ್ಷ ರೋಬರ್ಟ್ ಮುಗಾಬೆ ಅವರೊಂದಿಗೆ ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಬುಧವಾರ ಪ್ರಧಾನ ಮಂತ್ರಿ ಪದವಿ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಮುಗಾಬೆ ಮೂರು ದಶಕಗಳ ಸರ್ವಾಧಿಕಾರ ಅಂತ್ಯವೆಂಬಂತೆ ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಾರೆ. |