ಪಾಕಿಸ್ತಾನದ ಪರಮಾಣು ವಿಜ್ಞಾನಿ ಅಬ್ದುಲ್ ಖಾದೀರ್ ಖಾನ್ ಅವರಿಂದ ಪರಮಾಣು ಅಸ್ತ್ರ ಪ್ರಸರಣದ ಅಪಾಯವಿಲ್ಲವೆಂದು ಪಾಕಿಸ್ತಾನ ಅಮೆರಿಕಕ್ಕೆ ಭರವಸೆ ನೀಡಿದೆ.
ಲಿಬಿಯಾ, ಇರಾನ್ ಮತ್ತು ಉತ್ತರ ಕೊರಿಯಾಕ್ಕೆ ಪರಮಾಣು ರಹಸ್ಯಗಳನ್ನು ಮಾರಾಟ ಮಾಡಿದ ಎ.ಕ್ಯೂ.ಖಾನ್ ಅವರನ್ನು ಕಳೆದ ಐದು ವರ್ಷಗಳಿಂದ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇತ್ತೀಚೆಗೆ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಿದ್ದರ ಕುರಿತ ಪ್ರಶ್ನೆಯೊಂದಕ್ಕೆ ಅಮೆರಿಕದ ವಿದೇಶಾಂಗ ಇಲಾಖೆಯ ಹಂಗಾಮಿ ವಕ್ತಾರ ರಾಬರ್ಟ್‌ವುಡ್ ಉತ್ತರವಾಗಿ ಈ ವಿಷಯ ತಿಳಿಸಿದ್ದಾರೆ.
ಪಾಕಿಸ್ತಾನ ವಚನ ನೀಡಿದರೆ ಸಾಕೆ?ಎಂದಾಗ ಅವರ ಆಶ್ವಾಸನೆಯನ್ನು ನಂಬಲೇಬೇಕು. ಅದಾದ ನಂತರವೂ ಅದನ್ನು ಪಾಕಿಸ್ತಾನ ಎಷ್ಟರ ಮಟ್ಟಿಗೆ ಪಾಲಿಸುತ್ತದೆ ಎಂಬುದನ್ನು ನೋಡಬೇಕು ಎಂದು ರಾಬರ್ಟ್ ಪ್ರತಿಕ್ರಿಯಿಸಿದ್ದಾರೆ. |