ವಿದೇಶ ಪ್ರವಾಸ ವೇಳೆ ಭೇಟಿ ನೀಡಿದ್ದ ಚೀನಾ ಪ್ರಧಾನಿ ವೆನ್ ಜಿಬಾವೋ ಅವರತ್ತ ಶೂ ಎಸೆದ ಜರ್ಮನ್ ಆರೋಪಿಯ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ಕ್ಯಾಂಬ್ರಿಡ್ಜ್ ನ್ಯಾಯಾಲಯ ಷರತ್ತುರಹಿತ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.
ಮೂರು ದಿನಗಳ ಕಾಲ ಭೇಟಿಗಾಗಿ ಬ್ರಿಟನ್‌ಗೆ ಆಗಮಿಸಿದ್ದ ಚೀನಾ ಪ್ರಧಾನಿಯತ್ತ ಇಂಗ್ಲೆಂಡ್ ಕ್ಯಾಂಬ್ರಿಡ್ಜ್ ಯೂನಿರ್ವಸಿಟಿಯ ಸಂಶೋಧಕ ಮಾರ್ಟಿನ್ ಜಾಂಕೆ ಅವಕು ಶೂ ಎಸೆದಿದ್ದರು.
ಮಾರ್ಟಿನ್ ವಿರುದ್ಧ ದಾಖಲಾದ ಆರೋಪದ ಬಗ್ಗೆ ನ್ಯಾಯಾಲಯಕ್ಕೆ ವಿವರಣೆ ನೀಡಲಾಯಿತು. ಅಲ್ಲದೇ ಅದಕ್ಕೂ ಮುನ್ನ ಪ್ರಾಧ್ಯಾಪಕ ತಾನು ಸಾರ್ವಜನಿಕ ನೀತಿಯನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಷರತ್ತುರಹಿತ ಜಾಮೀನು ನೀಡಿ, ಮುಂದಿನ ವಿಚಾರಣೆಯನ್ನು ಮಾರ್ಚ್‌ಗೆ ಮುಂದೂಡಿದೆ. |