ಪೂರ್ವ ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.0ರಷ್ಟು ತೀವ್ರತೆ ದಾಖಲಾಗಿರುವುದಾಗಿ ಅಮೆರಿಕ ಭೌಗೋಳಿಕ ಅಧ್ಯಯನ ವರದಿ ಮಾಡಿದೆ.
ಅಲ್ಲದೇ ಭಾರೀ ಭೂಕಂಪನದ ಬೆನ್ನಲ್ಲೇ, ತ್ಸುನಾಮಿ ಮುನ್ನೆಚ್ಚರಿಕೆಯನ್ನೂ ನೀಡಲಾಗಿತ್ತು ಆದರೆ ಕೆಲವು ತಾಸುಗಳ ಬಳಿಕ ಅದನ್ನು ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನದಿಂದಾಗಿ ಕನಿಷ್ಠ 17 ಮಂದಿ ಗಾಯಗೊಂಡಿದ್ದು, ಸುಮಾರು 20ರಷ್ಟು ಮನೆಗಳು ಧ್ವಂಸಗೊಂಡಿದೆ.
ಸುಲಾವೆಸಿಯ ಉತ್ತರ ಭಾಗ ಪ್ರದೇಶದಲ್ಲಿ ಭೂಕಂಪನದ ತೀವ್ರತೆ ಹೆಚ್ಚು ಅನುಭವವಾಗಿದೆ ಎಂದು ತಿಳಿದು ಬಂದಿದೆ.
|