ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚು ಸಂಬಂಧಿಸಿ ಶಂಕಿತ ಇಬ್ಬರನ್ನು ಸೆರೆ ಹಿಡಿಯಲಾಗಿದೆ ಎಂದು ಘಟನೆಯ ಕುರಿತು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಚರಿತ್ರೆಯಲ್ಲಿ ಅತೀ ದೊಡ್ಡದೆಂದು ಪರಿಗಣಿಸಲ್ಪಟ್ಟಿರುವ ಭೀಕರ ಕಾಡ್ಗಿಚ್ಚಿನಿಂದ 170ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಭೀಕರ ಕಾಳ್ಗಿಚ್ಚಿನಿಂದ ನೂರಾರು ಮನೆಗಳು, ಅರಣ್ಯಗಳು ಮತ್ತು ಕೃಷಿಭೂಮಿ ಅಗ್ನಿಗಾಹುತಿಯಾಗಿದ್ದು, ಅಪಾರ ನಾಶ-ನಷ್ಟವುಂಟಾಗಿದೆ. |