ಇಸ್ರೇಲ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ಪಕ್ಷಕ್ಕೆ ಬಹುಮತ ಲಭಿಸದೇ ಅತ್ರಂತ ರಾಜಕೀಯ ಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಮಧ್ಯಪ್ರಾಚ್ಯ ಶಾಂತಿ ಮಾತುಕತೆ ಯಾವ ದಿಕ್ಕಿಗೆ ಸಾಗಲಿದೆ ಎಂಬು ಬಗ್ಗೆ ಕೂತೂಹಲ ಮೂಡಿಸಿದೆ. ಇಸ್ರೇಲ್‌ನ ವಿದೇಶಾಂಗ ಸಚಿವ ಟಿಜಿಪಿ ಲಿವ್ನಿ ನೇತೃತ್ವದ ಕದಿಮಾ ಪಕ್ಷವು ತನ್ನ ಎದುರಾಳಿ ಬೆಂಜಮಿನ್ ನೆತಾನ್‌ಹೂ ಅವರ ಲಿಕುಡ್ ಪಕ್ಷಕ್ಕಿಂತ ಕೇವಲ ಒಂದು ಸೀಟ್ ಮುನ್ನಡೆ ಪಡೆದುಕೊಂಡಿದ್ದು, ನೂತನ ಸರಕಾರ ರಚನೆ ಅನಿಶ್ಚಿತತೆಯಲ್ಲಿ ಮುಂದುವರಿಯುತ್ತಿದ್ದು, ಸಣ್ಣ ಪಕ್ಷಗಳಿಗೆ ಭಾರಿ ಬೇಡಿಕೆ ಬಂದಿದೆ. |