ಪಾಕ್ ಹಾಗೂ ಗಡಿಭಾಗದಲ್ಲಿನ ಸಮಸ್ಯೆಗಳನ್ನು ಇತ್ಯರ್ಥಪಡಿಸುವಲ್ಲಿ ಜಂಟಿ ಹೋರಾಟಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಕೈಜೋಡಿಸಿರುವುದಾಗಿ ಪಾಕ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಗೂ ಗಡಿಭಾಗದಲ್ಲಿ ತಲೆಎತ್ತಿರುವ ಅಲ್ ಖಾಯಿದಾ, ತಾಲಿಬಾನ್‌ಗಳ ಅಟ್ಟಹಾಸ ಮಟ್ಟಹಾಕುವಲ್ಲಿ ಜಂಟಿ ಕಾರ್ಯಾಚರಣೆ ನಡೆಸುವಲ್ಲಿ ಒಬಾಮ ಅವರು ಜರ್ದಾರಿ ಜೊತೆ ದೂರವಾಣಿ ಸಂಭಾಷಣೆ ನಡೆಸಿರುವುದಾಗಿ ಸಚಿವಾಲಯ ಹೇಳಿದೆ.
ಜರ್ದಾರಿಯ ಜೊತೆಗಿನ ಮಾತುಕತೆಯ ಬಳಿಕ, ಏಪ್ರಿಲ್‌ನಲ್ಲಿ ನಡೆಯುವ ನ್ಯಾಟೋ ಸಮಿತಿಗೂ ಮುನ್ನ ಅಫ್ಘಾನ್ ಮತ್ತು ಪಾಕಿಸ್ತಾನ ಬಗೆಗಿನ ಅಮೆರಿಕ ನೀತಿಯನ್ನು ಪುನರ್ ಪರಿಶೀಲಿಸುವಂತೆ ಒಬಾಮ ಅವರು ಆದೇಶ ನೀಡಿರುವುದಾಗಿ ಶ್ವೇತ ಭವನದ ಮೂಲಗಳು ತಿಳಿಸಿತ್ತು.
ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವ ದೇಶದ ಏಳಿಗೆಗಾಗಿ ಜಂಟಿ ಕಾರ್ಯಾಚರಣೆ ನಡೆಸಲು ಎರಡೂ ದೇಶಗಳು ಕೈಜೋಡಿಸಿರುವುದಾಗಿ ವಿದೇಶಾಂಗ ಸಚಿವಾಲಯದ ಪ್ರಕಟಣೆ ವಿವರಿಸಿದೆ. |