ಅಮೆರಿಕದ ಖಾಸಗಿ ಮಾಲೀಕತ್ವದ ಸಂಪರ್ಕ ಉಪಗ್ರಹ ಇರಿಡಿಯಂ(900ಕೀ.ಗ್ರಾಂ) ಮತ್ತು ರಷ್ಯಾದ ಕಾಸ್‌ಮಾಸ್(550ಕೀ.ಗ್ರಾಂ) ಮಿಲಿಟರಿ ಉಪಗ್ರಹವು ಬಾಹ್ಯಾಕಾಶದಲ್ಲಿ ಪರಸ್ಪರ ಡಿಕ್ಕಿಯಾದ ಘಟನೆ ಸಂಭವಿಸಿದ್ದು, ಈ ವೇಳೆಯಲ್ಲಿ ಮಿಂಚಿನಂತಹ ಬೆಳಕು ಹೊರರೊಮ್ಮಿರುವುದಾಗಿ ಅಮೆರಿಕದ ರಕ್ಷಣಾ ಇಲಾಖೆಯ ಬಾಹ್ಯಾಕಾಶಾ ಸರ್ವೆಕ್ಷಣಾ ಜಾಲ ತಿಳಿಸಿದೆ. ಸೈಬೀರಿಯಾದಿಂದ ಸುಮಾರು 780 ಕಿ.ಮೀ ಎತ್ತರದಲ್ಲಿ ಮಂಗಳವಾರ ಈ ಅಪಘಾತ ಸಂಭವಿಸಿದೆ.
ಬಾಹ್ಯಾಕಾಶದ ಕಕ್ಷೆಯಲ್ಲಿ ಎರಡು ಉಪಗ್ರಹಗಳು ಡಿಕ್ಕಿಹೊಡೆದಿದ್ದು ಇದೇ ಪ್ರಥಮಬಾರಿಯಾಗಿದೆ. 1993ರಲ್ಲಿ ರಷ್ಯಾ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಹಾರಿಬಡಲಾಗಿತ್ತು. ಸದ್ಯ ರಷ್ಯಾದ ಉಪಗ್ರಹವು ಭೂಮಿ ನಿಯಂತ್ರಣವನ್ನು ಕಳಕೊಂಡಿದ್ದು, ಬಳಕೆಯಲ್ಲಿರಲಿಲ್ಲ. 1977ರಲ್ಲಿ ಅಮೆರಿಕ ಉಪಗ್ರಹವನ್ನು ಉಡಾಯಿಸಲಾಗಿತ್ತು. ಈ ಢಿಕ್ಕಿಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಾವುದೇ ಆತಂಕವಿಲ್ಲವೆಂದು ನಾಸಾ ಹಾಗೂ ರಷ್ಯಾದ ವಿಜ್ಞಾನಿಗಳು ಭರವಸೆ ನೀಡಿದ್ದಾರೆ.
|