ಉತ್ತರ ನ್ಯೂಜಿಲ್ಯಾಂಡ್‌ನ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿರುವುದಾಗಿ ಅಮೆರಿಕ ಭೂಗರ್ಭ ಇಲಾಖೆ ಶಾಸ್ತ್ರಜ್ಞರು ತಿಳಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿರುವುದಾಗಿ ವರದಿಯಲ್ಲಿ ತಿಳಿಸಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಗುರುವಾರ ರಾತ್ರಿ 12ರ ಅಸುಪಾಸಿನಲ್ಲಿ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಸಮುದ್ರದಾಳದಲ್ಲಾಗಿತ್ತು, ಸುಮಾರು 35ಕಿ.ಮೀ. ಆಳದ ತನಕ ಇದರ ಪ್ರಭಾವವಿತ್ತು. ಈ ಪ್ರದೇಶದಲ್ಲಿ ಪ್ಲೇಟ್‌ಗಳ ಚಲವಲನಗಳಿಂದಾಗಿ ಪದೇ ಪದೇ ಭೂಕಂಪ ನಡೆಯುತ್ತಲೇ ಇದೆ. |