ಕಳೆದ ಮೂರು ತಿಂಗಳ ಹಿಂದೆ ಸೋಮಾಲಿ ಕಡಲ್ಗಳ್ಳರು ಗಲ್ಪ್ ಆಫ್ ಆಡೆನ್‌ನಲ್ಲಿ ಅಪಹರಿಸಿದ್ದ ಜಪಾನ್‌ನ ಹಡಗನ್ನು ಶುಕ್ರವಾರ ಬಂಧಮುಕ್ತಗೊಳಿಸಿದ್ದು, ಹಡಗಿನಲ್ಲಿದ್ದ ವರೆಲ್ಲ ಸುರಕ್ಷಿತರಾಗಿರುವುದಾಗಿ ತಿಳಿದು ಬಂದಿದೆ.
ಹಡಗಿನಲ್ಲಿ 18ಮಂದಿ ಫಿಲಿಫೈನ್ಸ್ ಮತ್ತು ಐದು ದಕ್ಷಿಣ ಕೊರಿಯಾ ಸೇರಿದಂತೆ ಒಟ್ಟು 23ಮಂದಿ ಸಿಬ್ಬಂದಿಗಳು ಇದ್ದಿದ್ದರು. ಅವರೆಲ್ಲ ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ನವೆಂಬರ್ 15ರಂದು ಸೋಮಾಲಿ ಕಡಲ್ಗಳ್ಳರು ಹಡಗನ್ನು ಅಪಹರಿಸಿದ್ದರು, ಇದೀಗ ಮೂರು ತಿಂಗಳ ದೀರ್ಘ ಅವಧಿಯ ಬಳಿಕ ಹಡಗನ್ನು ಬಿಡುಗಡೆಗೊಳಿಸಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. |