ಮುಂಬೈ ಭಯೋತ್ಪಾದನಾ ದಾಳಿ ಬಗ್ಗೆ ಗುರುವಾರ ಪಾಕಿಸ್ತಾನ ಪ್ರತಿಕ್ರಿಯೆ ನೀಡಿರುವುದನ್ನು ತಾನು ಸ್ವಾಗತಿಸಿರುವುದಾಗಿ ಅಮೆರಿಕ ತಿಳಿಸಿದ್ದು, ದಾಳಿ ಹಿಂದಿನ ಸಂಚುಕೋರ ವಿರುದ್ಧ ಪಾಕ್ ಕ್ರಮಕೈಗೊಳ್ಳಲಿ ಎಂದು ಆಗ್ರಹಿಸಿದೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ನಾವು ಪಾಕಿಸ್ತಾನದ ಹತ್ತಿರ ವಿವರ ಕೇಳಿದ್ದೇವು, ಅದೇ ರೀತಿ ಭಾರತ ಪಾಕ್ ಅನ್ನು ಕೇಳಿತ್ತು, ಆ ನಿಟ್ಟಿನಲ್ಲಿ ಜಂಟಿ ಸಹಕಾರದೊಂದಿಗೆ ನ್ಯಾಯಪಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗಿತ್ತು ಎಂದು ಅಮೆರಿಕದ ವಕ್ತಾರ ರೋಬರ್ಟ್ ವುಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಲವು ದಿನಗಳ ಬಳಿಕ ದಾಳಿಯ ಕುರಿತಂತೆ ಪಾಕಿಸ್ತಾನ ನೀಡಿರುವ ಪ್ರತಿಕ್ರಿಯೆಯ ಈ ಬೆಳವಣಿಗೆ ಸಕರಾತ್ಮಕವಾದದ್ದು ಎಂದು ಹೇಳಿದೆ. ಸಂಚಿನಲ್ಲಿ ಶಾಮೀಲಾದವರ ವಿರುದ್ದ ಪಾಕಿಸ್ತಾನ ನಿಷ್ಪಕ್ಷಪಾತವಾದ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು. |