ನೂತನ ಕ್ಯಾಬಿನೆಟ್ ಅಧಿಕಾರ ಸ್ವೀಕಾರದ ಹಿನ್ನೆಲೆಯಲ್ಲಿ ವಿರೋಧ ಪಕ್ಷದ (ಎಂಡಿಸಿ) ಹಿರಿಯ ಮುಖಂಡ ಬೆನ್ನೆಟ್ಟ್ ಅವರನ್ನು ಶುಕ್ರವಾರ ಜಿಂಬಾಬ್ವೆಯ ಭದ್ರತಾ ಅಧಿಕಾರಿಗಳು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಚಾರ್ಲ್ಸ್ ಪ್ರಿನ್ಸ್ ವಿಮಾನ ನಿಲ್ದಾಣದಲ್ಲಿ ರಾಯ್ ಬೆನ್ನೆಟ್ಟ್ ಅವರನ್ನು ಬಂಧಿಸಲಾಗಿತ್ತು. ರಾಯ್ ಅವರು ಎಲ್ಲಿಂದ ಬಂದಿದ್ದರು, ಎಷ್ಟೊತ್ತಿಗೆ ಬಿಟ್ಟಿದ್ದರು ಎಂಬ ಮಾಹಿತಿ ತಮಗಿಲ್ಲ ಎಂದು ಎಂಡಿಸಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನೂತನ ಪ್ರಧಾನಮಂತ್ರಿ ಮೊರ್ಗಾನ್ ತ್ಸಾವಂಗಿರಿ ಅವರ ಕ್ಯಾಬಿನೆಟ್‌ನಲ್ಲಿ ಸಹಾಯಕ ಕೃಷಿ ಸಚಿವರಾಗಿ ಬೆನ್ನೆಟ್ಟ್ ಅವರನ್ನು ನೇಮಕ ಮಾಡಲಾಗಿತ್ತು. |