ಸ್ಪೋಟಕಗಳನ್ನು ಹೊಂದಿದ ಮಹಿಳಾ ಆತ್ಮಾಹುತಿ ಬಾಂಬರ್ ಒಬ್ಬಾಕೆ ತನ್ನನ್ನು ತಾನೆ ಸ್ಪೋಟಸಿಕೊಂಡ ಪರಿಣಾಮ 30 ಶಿಯಾ ಯಾತ್ರಿಗಳು ಮೃತಪಟ್ಟಿದ್ದು, 60ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಇರಾಕ್ ರಾಜಧಾನಿ ಬಾಗ್ದಾದ್‌ನ ದಕ್ಷಿಣ ಭಾಗ ಪ್ರದೇಶ ಇಸ್ಕಾಂದಿರಿಯಾ ಎಂಬಲ್ಲಿ ಶುಕ್ರ ಈ ದಾಳಿ ನಡೆದಿದೆ. ಸತ್ತವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದು, ಕಾರ್ಬಲ್‌ನಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮ ಪಾಲ್ಗೊಳ್ಳಲು ಆಗಮಿಸಿದ್ದ ಯಾತ್ರಿಗಳ ಮಧ್ಯೆ ದೌಡಯಿಸಿದ ಈ ಮಹಿಳೆ ತನ್ನನ್ನು ತಾನೆ ಸ್ಫೋಟಿಸಿ ದಾಳಿ ನಡೆಸಿದ್ದಾಳೆ.
ಆತ್ಮಾಹುತಿ ದಾಳಿಯ ಹಿಂದೆ ಸುನ್ನಿ ಅಲ್-ಖೈದಾದ ಭಯೋತ್ಪಾದಕ ಗುಂಪಿನ ಕೈವಾಡವಿರುವುದಾಗಿ ಶಂಕಿಸಲಾಗಿದೆ. ಇರಾಕ್ ಪೊಲೀಸ್ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
|