ಹಿಂದೂ ಮಹಾಸಾಗರದಲ್ಲಿ ರಷ್ಯಾನ್ ನ್ಯೂಕ್ಲಿಯರ್ ಪವರ್ ನೌಕಾ ಸೇನಾ ಪಡೆಯಿಂದ ಹತ್ತು ಸೋಮಾಲಿ ಕಡಲ್ಗಳ್ಳರನ್ನು ಸೆರೆಹಿಡಿಯಲಾಗಿದೆ ಎಂದು ರಷ್ಯನ್ ನಾವಿಕ ಸೇನಾ ವಕ್ತಾರ ಶುಕ್ರವಾರ ತಿಳಿಸಿದ್ದಾರೆ. ಹಿಂದೂ ಮಹಾಸಾಗರದಲ್ಲಿ ರಷ್ಯನ್ ಸೇನೆ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕಡಲ್ಗಳ್ಳರನ್ನು ಬಂಧಿಸಲಾಗಿದ್ದು, ಅಪಾರ ಪ್ರಮಾಣದ ಗ್ರೆನೆಡ್, ಶಸ್ತ್ರಾಸ್ತ್ರಗಳನ್ನು ವಶಪಡಿಸಲಾಗಿದೆ ಎಂದು ತಿಳಿದು ಬಂದಿದೆ. |