ಪಾಕಿಸ್ತಾನ ಗಡಿಭಾಗದ ಬುಡಕಟ್ಟು ಆದಿವಾಸಿ ಪ್ರದೇಶದಲ್ಲಿ ತಾಲಿಬಾನ್ ಅಡಗುತಾಣಗಳ ಮೇಲೆ ಅಮೆರಿಕ ಸೇನೆ ನಡೆಸಿದ ಮಿಸೈಲ್ ದಾಳಿಯಲ್ಲಿ ಇಸ್ಲಾಮಿಕ್ ಉಗ್ರರೆಂದು ಶಂಕಿತ 20 ಮಂದಿ ಬಲಿಯಾಗಿದ್ದಾರೆಂದು ಸುರಕ್ಷಾ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ ಸೈನ್ಯವು ಕ್ಷೀಪ್ರವಾದ ಕಾರ್ಯಾಚರಣೆ ಕೈಗೊಂಡಿದ್ದು, ಉಗ್ರರ ಅಡಗುತಾಣಗಳನ್ನು ಸಂಪೂರ್ಣ ಧ್ವಂಸಗೊಳಿಸಲಾಗಿದೆ. |