ಶ್ರೀಲಂಕಾದ ಉತ್ತರ ಭಾಗದ ಯುದ್ಧ ಪೀಡಿತ ಪ್ರದೇಶದಿಂದ ಬಸ್ ಮೂಲಕ ತೆರಳುತ್ತಿದ್ದ ತಮಿಳು ನಾಗರಿಕರ ಮೇಲೆ ಎಲ್‌ಟಿಟಿಇ ಗ್ರೆನೆಡ್ ದಾಳಿ ನಡೆಸಿದ್ದು, ಘಟನೆಯಲ್ಲಿ ಒಬ್ಬಳು ಮಹಿಳೆ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಪುಲಿಯಕುಲಂ ದ್ವೀಪ ಪ್ರದೇಶದಲ್ಲಿ ಆಕ್ರಮಣವು ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಮೂರನೇ ಬಾರಿಗೆ ತನ್ನ ವಶದಿಂದ ನುಸುಳಿ ಹೋಗುವ ತಮಿಳು ನಾಗರಿಕರ ಮೇಲೆ ಎಲ್‌ಟಿಟಿಇ ದಾಳಿಯನ್ನು ನಡೆಸಿದೆ. |