ಅಮೆರಿಕದ ವಿಶೇಷ ರಾಯಭಾರಿ ಹಾಲ್‌ಬ್ರೂಕ್ ಭಾನುವಾರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಮುಂಬೈ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಅವರು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರನ್ನು ಸೋಮವಾರ ಭೇಟಿ ಮಾಡಲಿದ್ದಾರೆ.
ಒಬಾಮ ಆಡಳಿತ ಕ್ರಮಗಳ ಬಗ್ಗೆ ಹಾಗೂ ಭಾರತದ ನಿಲುವುಗಳ ಬಗ್ಗೆ ವಿಚಾರ ವಿನಿಮಯಕ್ಕೆ ಇಂದು ಒಳ್ಳೆಯ ಅವಕಾಶವಾಗಿದೆ. ಈಗಾಗಲೇ ಹಾಲ್ ಬ್ರೂಕ್ ಅವರು ಪಾಕ್ ಹಾಗೂ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿ ಈಗ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಭಾರತ ಮುಂಬೈ ಭಯೋತ್ಪಾದನಾ ದಾಳಿಗಳ ಸಾಕ್ಷ್ಯಾಧಾರಗಳನ್ನು ಹಾಲ್ ಬ್ರೂಕ್ ಅವರೊಂದಿಗೆ ಹಂಚಿಕೊಳ್ಳಲಿದೆ. |