ವಾಷಿಂಗ್ಟನ್: ಅಮೆರಿಕಾದಲ್ಲಿನ ಖಾಲಿ ಇರುವ ರಾಜಕೀಯ ಹುದ್ದೆಗಳನ್ನು ತುಂಬುವ ಸಲುವಾಗಿ ಬರಾಕ್ ಒಬಾಮಾ ನೇತೃತ್ವದ ಸರಕಾರ ಭಾರತದ ಕನ್ನಡ ಸೇರಿದಂತೆ ಸುಮಾರು 20 ಭಾಷೆಗಳಿಗೆ ಅರ್ಜಿ ನಮೂನೆಯಲ್ಲಿ ಜಾಗ ಮಾಡಿ ಕೊಟ್ಟಿದೆ. ಆಕಾಂಕ್ಷಿಗಳು ಅರ್ಜಿಗಳನ್ನು ತುಂಬುವಾಗ ಭಾಷೆ, ರಾಜ್ಯಗಳನ್ನು ಕೂಡ ನಮೂದಿಸ ಬೇಕಾಗಿರುವುದರಿಂದ ಅಲ್ಲಿ ಭಾರತದ ಭಾಷೆಗಳನ್ನೂ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. |