ಪಾಕಿಸ್ತಾನದ ಕಳಂಕಿತ ಪರಮಾಣು ವಿಜ್ಞಾನಿ ಎ.ಕ್ಯೂ. ಖಾನ್ ಅವರಿಗೆ ಕನಿಷ್ಠ 6000 ರಿಂಗ್ ಮ್ಯಾಗ್ನೆಟ್‌ಗಳು ಮತ್ತಿತರ ಸಾಮಗ್ರಿಗಳನ್ನು ಕಳಿಸುವಲ್ಲಿ ಜಪಾನಿನ ಕಂಪೆನಿಗಳು ಪಾತ್ರವಹಿಸಿವೆಯೆಂಬ ಸಂಗತಿ ಬಯಲಾಗಿದೆ.
ಜಪಾನ್ ಕಂಪೆನಿಗಳ ಸರಬರಾಜಿನಿಂದ ಇಸ್ಲಾಮಾಬಾದ್ ಪರಮಾಣು ಸಾಮರ್ಥ್ಯ ಹೊಂದಲು ನೆರವಾಯಿತೆಂದು ಹೇಳಲಾಗಿದೆ. ಅಣ್ವಸ್ತ್ರ ವಿರೋಧಿ ನಿಲುವನ್ನು ಹೊಂದಿರುವ ಜಪಾನ್ ಈ ಘಟನೆಯಿಂದ ತೀವ್ರ ಮುಜುಗರಪಡುವಂತಾಗಿದೆ.
ಜಪಾನಿನ ಕಂಪೆನಿಗಳು ಪಾಕಿಸ್ತಾನದ ಅಣ್ವಸ್ತ್ರ ಅಭಿವೃದ್ಧಿಗೆ ಬಳಸಲಾದ ಸಾಮಗ್ರಿಯನ್ನು ಕಳಿಸುವಲ್ಲಿ ಮುಖ್ಯಪಾತ್ರವಹಿಸಿದೆ ಎಂದು ಇಸ್ಲಾಮಾಬಾದ್ ಮತ್ತು ಟೋಕಿಯೊದಲ್ಲಿ ತನಿಖೆಯ ಫಲಶ್ರುತಿಯನ್ನು ಉಲ್ಲೇಖಿಸಿ ಜಪಾನ್ ಕ್ಯೋಡೊ ನ್ಯೂಸ್ ವರದಿ ಮಾಡಿದೆ.ಖಾನ್ ಮತ್ತು ಕಂಪೆನಿಗಳ ಮಾಜಿ ನೌಕರರ ಹೇಳಿಕೆಗಳಿಂದ ಜಪಾನಿನ ಪ್ರಮುಖ ಉತ್ಪಾದಕರು ಗೊತ್ತಿದ್ದು ಅಥವಾ ಗೊತ್ತಿಲ್ಲದೆಯೇ ಪಾಕಿಸ್ತಾನ ಅಣ್ವಸ್ತ್ರ ಸಾಮರ್ಥ್ಯ ಹೊಂದಲು ನೆರವಾಯಿತು ಮತ್ತು ಅದರ ಪೂರೈಕೆ ಚೌಕಟ್ಟಿನಲ್ಲಿ ಅಳವಡಿಸಲಾಯಿತೆಂದು ಬಯಲಾಗಿದೆ.
ಖಾನ್ ಮತ್ತು ಪಾಕಿಸ್ತಾನದ ಅಣುಆಯೋಗದ ಮುಖ್ಯಸ್ಥರು ಜಪಾನ್‌ಗೆ ಕನಿಷ್ಠ ಒಂದು ಬಾರಿ ಈ ಕುರಿತು ಭೇಟಿ ನೀಡಿದ್ದರೆಂಬುದು ತನಿಖೆಯಿಂದ ಬಯಲಾಗಿದೆ. |