ನ್ಯೂಯಾರ್ಕ್: ಇತ್ತೀಚೆಗಷ್ಟೇ ಇಲ್ಲಿನ ಜನವಸತಿ ಪ್ರದೇಶ ಬಫೆಲೊ ಎಂಬಲ್ಲಿ ಘಟಿಸಿದ ವಿಮಾನ ಅಪಘಾತಕ್ಕೆ ಪೈಲಟ್ ಸುರಕ್ಷಾ ನಿಯಮಗಳನ್ನು ಉಲ್ಲಂಘಿಸಿದ್ದೇ ಕಾರಣ ಎಂದು ಫೆಡರಲ್ ಅಧಿಕಾರಿಗಳು ತನಿಖೆಯ ನಂತರ ತಿಳಿಸಿದ್ದಾರೆ. ತೀವ್ರ ಶೀತ ವಾತಾವರಣ ಸಂದರ್ಭದಲ್ಲಿ ಅನುಸರಿಸಬೇಕಾದ ನಿಯಮಗಳನ್ನು ಬದಿಗಿರಿಸಿ, ಸ್ವಯಂಚಾಲನಾ ವ್ಯವಸ್ಥೆಗೆ ಪೈಲಟ್ ಮೊರೆ ಹೋದದ್ದರಿಂದ ಅಪಘಾತ ಸಂಭವಿಸಿದೆ.
|