ಇರಾಕಿನ ಕರ್ಬಾಲಾ ನಗರದಲ್ಲಿ ಸಾವಿರಾರು ಶಿಯಾ ಮುಸ್ಲಿಮರು ಬಿಗಿ ಬಂದೋಬಸ್ತ್‌ನಲ್ಲಿ ಇಮಾಮ್ ಸ್ಮರಣಾರ್ಥ ಶೋಕಾಚರಣೆಯನ್ನು ಸೋಮವಾರ ಕೈಗೊಂಡ ನಡುವೆ ಬಾಗ್ದಾದ್ ಬಸ್ ಬಾಂಬ್ ಸ್ಫೋಟದಲ್ಲಿ ಯಾತ್ರಿಗಳು ಸೇರಿದಂತೆ 8 ಜನರು ಹತರಾಗಿದ್ದಾರೆ.
ಶೋಕತಪ್ತರ ಗುಂಪು 'ಯಾ ಹುಸೇನ್' ಎಂದು ಉದ್ಗರಿಸುತ್ತಾ, ಇಮಾಮ್ ಹುಸೇನ್ ಮತ್ತು ಅವರ ಮಲಸೋದರ ಅಬ್ಬಾಸ್ ಸಮಾಧಿಯ ಮೂಲಕ ಅರಬೀನ್ ಆಚರಣೆಗೆ ಸಾಗಿದರು. ಗಾಳಿಯನ್ನು ಮತ್ತು ಎದೆಯನ್ನು ಬಡಿದುಕೊಳ್ಳುತ್ತಾ ಅವರು ಸಾಗಿದರೆ, ಉಳಿದವರು ಹಸಿರು ಮತ್ತು ಕಪ್ಪು ಧ್ವಜಗಳನ್ನು ಹಿಡಿದಿದ್ದರು.ಆದರೆ ಬಾಗ್ದಾದ್‌ಗೆ ಹಿಂತಿರುಗುತ್ತಿದ್ದ 4 ಯಾತ್ರಾರ್ಥಿಗಳು ಸೇರಿದಂತೆ 8 ಮಂದಿ ಹಿಂಸಾಚಾರಕ್ಕೆ ಬಲಿಯಾಗಿದ್ದು, ಮಿನಿಬಸ್‌ಗಳಲ್ಲಿ ಸ್ಫೋಟಿಸಿದ ಬಾಂಬ್‌ಗಳಿಗೆ ಬಲಿಯಾಗಿದ್ದಾರೆಂದು ವೈದ್ಯಕೀಯ ಮತ್ತು ಪೊಲೀಸ್ ಮೂಲಗಳು ತಿಳಿಸಿವೆ.
ಮೊಸುಲ್‌ನಲ್ಲಿ ಸೇನಾ ಗಸ್ತುಪಡೆ ಮೇಲೆ ಗುರಿಯಿರಿಸಿದ ಸ್ಫೋಟದಲ್ಲಿ ಇರಾಕಿ ಸೈನಿಕನೊಬ್ಬ ಸತ್ತಿದ್ದಾನೆ. ಕಳೆದ ವಾರದಿಂದ ಲಕ್ಷಾಂತರ ಶಿಯಾ ಮುಸ್ಲಿಮರು ನಗರದ ಮೂಲಕ ಹಾದುಹೋಗಿದ್ದು, 40 ದಿನಗಳ ಶೋಕಾಚರಣೆ ಅವಧಿಯ ಅಂತ್ಯದ ಸಂಕೇತವಾಗಿ ಕಾಲ್ಗಡಿಗೆಯಲ್ಲಿ ಬಹು ದೂರಗಳನ್ನು ಕ್ರಮಿಸಿದ್ದರು. ಆದರೆ ಯಾತ್ರಿಗಳ ಮೇಲೆ ಮಾರಕ ಬಾಂಬ್‌ದಾಳಿಗಳಿಂದ ಇದುವರೆಗೆ 50 ಜನರು ಬಲಿಯಾಗಿದ್ದು, ಇಮಾಮ್ ಹುಸೇನ್ ಮಸೀದಿಯ ಬಳಿಯೇ 8 ಜನರು ಹತರಾಗಿದ್ದಾರೆ. |