ಪ್ರೇಮಿಗಳ ದಿನದಂದು ಮೆಕ್ಸಿಕೊ ನಗರ ಕೇಂದ್ರದಲ್ಲಿ ಸುಮಾರು 40ಸಾವಿರ ಪ್ರೇಮಿಗಳು ಸೇರಿದ್ದರು. ತಮ್ಮ ಪ್ರೇಮಿಗಳಿಗೆ ಪ್ರೀತಿಯ ಬಿಸಿಯುಸಿರನ್ನು ಮುಟ್ಟಿಸಿ, ಚುಂಬನದಲ್ಲಿ ನೂತನ ದಾಖಲೆ ನಿರ್ಮಿಸುವುದು ಅವರ ಉದ್ದೇಶವಾಗಿತ್ತು.
ಮೆಕ್ಸಿಕೊದ ಸೆಂಟ್ರಲ್ ಪ್ಲಾಜಾದಲ್ಲಿ ಸೇರಿದ್ದ ಸಾವಿರಾರು ಪ್ರೇಮಿಗಳು ಏಕಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿ ತುಟಿಗೆ ತುಟಿ ಬೆಸೆಯುವ ಮೂಲಕ ಚುಂಬನದ ಹಿಂದಿನ ದಾಖಲೆ ಮುರಿದರು. ವ್ಯಾಲೆಂಟೈನ್ ದಿನದಂದು ನಗರದ ಜೊಕಾಲೊ ಮುಖ್ಯ ಚೌಕಕ್ಕೆ 39,897 ದಾಖಲೆಯ ಜನರು ಪ್ರವೇಶಿಸಿದ್ದನ್ನು ಗಿನ್ನೆಸ್ ವಿಶ್ವದಾಖಲೆಯ ಕಾರ್ಲೋಸ್ ಮಾರ್ಟಿನೆಟ್ ಗುರುತಿಸಿದ್ದಾರೆ.
2007ರಲ್ಲಿ ಇಂಗ್ಲಿಷ್ ಪಟ್ಟಣವಾದ ವೆಸ್ಟನ್-ಸೂಪರ್-ಮೇರ್ ಚುಂಬನದ ದಾಖಲೆ ನಿರ್ಮಿಸಿತ್ತು.ಮಾದಕವಸ್ತು ಸಾಗಣೆದಾರರ ವಿರುದ್ಧ ದಾಳಿಯಿಂದ ವ್ಯಾಪಕ ಹಿಂಸಾಚಾರ ಮೆಕ್ಸಿಕೊದಲ್ಲಿ ಸಂಭವಿಸಿದ ಗಳಿಗೆಯಲ್ಲಿ ವ್ಯಾಲೆಂಟೈನ್ ದಿನದ ಚುಂಬನವು ಪ್ರೀತಿಯ ದ್ಯೋತಕವಾಗಿತ್ತು.
2008ರಲ್ಲಿ ಸಂಭವಿಸಿದ ಮಾದಕವಸ್ತು ಸಂಬಂಧಿತ ಸಂಘರ್ಷಗಳಲ್ಲಿ 6000 ಜನರು ಬಲಿಯಾಗಿದ್ದರು. ಪ್ರವಾಸೋದ್ಯಮ ಇಲಾಖೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮಾನವ ಸಂಬಂಧಗಳ ಬಗ್ಗೆ ದಂಪತಿಯ ಧೋರಣೆಯನ್ನು ಬದಲಿಸಿ, ಗೌರವ, ಸಮಾನತೆ ಮತ್ತು ಸಹನೆ ಬಾಂಧವ್ಯದ ಕೇಂದ್ರಬಿಂದುವಾಗಲಿ ಎನ್ನುವ ಗುರಿಯೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆಯೆಂದು ಹೇಳಿಕೆ ತಿಳಿಸಿದೆ. |