ಹಮಾಸ್ ಪೊಲೀಸ್ ಕಣ್ಗಾವಲಿನಲ್ಲಿ ಗಾಜಾ ಪಟ್ಟಿಯಲ್ಲಿ ದಾಸ್ತಾನಿರಿಸಿದ್ದ ಐದು ಟನ್ ಸ್ಫೋಟಗೊಳ್ಳದ ಇಸ್ರೇಲಿ ಬಾಂಬ್‌ಗಳು ಕಳುವಾಗಿವೆಯೆಂದು ವಿಶ್ವಸಂಸ್ಥೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಸ್ಪೋಟಕಗಳನ್ನು ಗಾಜಾದಲ್ಲಿ ಸಂಗ್ರಹಿಸಿಡಲಾಗಿದ್ದು, ವಿಶ್ವಸಂಸ್ಥೆ ತಂಡದ ಬಾಂಬ್ ನಿಷ್ಕ್ರಿಯ ದಳ ತಜ್ಞರು ಅವನ್ನು ನಿಷ್ಕ್ರಿಯಗೊಳಿಸುವ ಮುನ್ನವೇ ಅವು ನಾಪತ್ತೆಯಾಗಿದೆ ಎಂದು ವಿಶ್ವಸಂಸ್ಥೆ ವಕ್ತಾರ ರಿಚರ್ಡ್ ಮಿರನ್ ತಿಳಿಸಿದ್ದಾರೆ.
ಇಸ್ರೇಲ್ ಕಳೆದ ತಿಂಗಳು ಗಾಜಾ ವಿರುದ್ಧ ವೈಮಾನಿಕ ದಾಳಿಯಲ್ಲಿ ಬಾಂಬ್‌ಗಳನ್ನು ಹಾಕಿತ್ತೆಂದು ಹೆಸರು ತಿಳಿಸಲು ಬಯಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಂದು ಟನ್ನಿನ ಮೂರು ಬಾಂಬ್‌ಗಳು ಮತ್ತು 8 ಕಾಲು ಟನ್ ಬಾಂಬ್‌ಗಳನ್ನು ಉಗ್ರಾಣದಿಂದ ಅಪಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಬಾಂಬ್‌ಗಳು ಅಪಾಯಕಾರಿಯಾಗಿದ್ದು, ಸುರಕ್ಷಿತ ವಿಧಾನದಲ್ಲಿ ಅವನ್ನು ನಿಷ್ಕ್ರಿಯಗೊಳಿಸಬೇಕಾಗಿದೆ ಎಂದು ಮಿರನ್ ತಿಳಿಸಿದ್ದಾರೆ.
ಫೆ.4ರಿಂದ ಫೆ.124ರ ನಡುವೆ ಹಮಾಸ್ ಪೊಲೀಸರ ಕಾವಲಿನಲ್ಲಿ ಸಾಮಗ್ರಿಯನ್ನು ಇಡಲಾಗಿತ್ತು. ಹಮಾಸ್ ಉಗ್ರರು ಈ ಸ್ಫೋಟಕಗಳನ್ನು ಅಪಹರಿಸಿರಬಹುದೆಂದು ಇಸ್ರೇಲ್ ಮಿಲಿಟರಿ ವಕ್ತಾರ ತಿಳಿಸಿದ್ದು, ನಾಪತ್ತೆಯಾದ ಬಾಂಬುಗಳ ಬಗ್ಗೆ ವಿಶ್ವಸಂಸ್ಥೆ ಇಸ್ರೇಲ್‌ಗೆ ಮಾಹಿತಿ ನೀಡಿದೆಯೆಂದು ಅವರು ಹೇಳಿದ್ದಾರೆ. |