ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಎಲ್‌ಟಿಟಿಇ ಕದನಕ್ಕೆ ಮಕ್ಕಳ ಬಳಕೆ: ಯ‌ೂನಿಸೆಫ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಟಿಟಿಇ ಕದನಕ್ಕೆ ಮಕ್ಕಳ ಬಳಕೆ: ಯ‌ೂನಿಸೆಫ್
ತಮ್ಮ ಕಟ್ಟಕಡೆಯ ನೆಲೆಯಾದ ವಾನ್ನಿಯಲ್ಲಿ ಭೀಕರ ಮಿಲಿಟರಿ ಆಕ್ರಮಣ ಎದುರಿಸುತ್ತಿರುವ ಎಲ್‌ಟಿಟಿಇ ಗೆರಿಲ್ಲಾಗಳು ಮಕ್ಕಳನ್ನು ಹೋರಾಟಕ್ಕೆ ನೇಮಿಸಿಕೊಳ್ಳುವ ದುಷ್ಕೃತ್ಯಕ್ಕೆ ಕೈಹಾಕಿದೆ.

ಶ್ರೀಲಂಕಾದ ಸೈನಿಕರ ವಿರುದ್ಧ ಹೋರಾಟಕ್ಕೆ ನಾಗರಿಕರನ್ನು ಮತ್ತು ಕೇವಲ 14ರ ವಯೋಮಾನದ ಮಕ್ಕಳನ್ನು ಸಹ ಎಲ್‌ಟಿಟಿಇ ನೇಮಕ ಮಾಡಿಕೊಳ್ಳುತ್ತಿದ್ದು, ಆ ಮಕ್ಕಳ ಜೀವ ಅಪಾಯದ ಸುಳಿಯಲ್ಲಿ ಸಿಕ್ಕಿದೆಯೆಂದು ಯ‌ೂನಿಸೆಫ್ ಪ್ರತಿನಿಧಿ ಫಿಲಿಪ್ ಡಾಮೆಲ್ಲ ತಿಳಿಸಿದ್ದಾರೆ.

ವಾನ್ನಿಯಲ್ಲಿ ಹೋರಾಟದಲ್ಲಿ ಅತ್ಯಧಿಕ ಸಂಖ್ಯೆಯ ಮಕ್ಕಳು ಗಾಯಗೊಂಡಿದ್ದರಿಂದ ತಮಗೆ ತೀವ್ರ ಕಳವಳವಾಗಿದೆಯೆಂದು ಯ‌ೂನಿಸೆಫ್ ತಿಳಿಸಿದೆ. ಎಲ್‌ಟಿಟಿಇ ಹೋರಾಟಕ್ಕೆ ಮಕ್ಕಳು ಬಲಿಪಶುವಾಗಿದ್ದು, ಅನೇಕ ಮಕ್ಕಳು ಸತ್ತಿದ್ದಾರೆ, ಗಾಯಗೊಂಡಿದ್ದಾರೆ ಹಾಗೂ ಅವರಿಗೆ ದಿನನಿತ್ಯದ ಅಗತ್ಯಗಳನ್ನು ನಿರಾಕರಿಸಲಾಗಿದೆ ಎಂದು ಡಾಮೆಲೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಕ್ಕಳ ದೇಹಗಳಲ್ಲಿ ಸುಟ್ಟಗಾಯಗಳು, ತುಂಡಾಗಿರುವ ಮ‌ೂಳೆಗಳು, ಚೂಪಾದ ಮತ್ತು ಗುಂಡುಗಳಿಂದ ಉಂಟಾದ ಗಾಯಗಳು ದಾರುಣ ದೃಶ್ಯವನ್ನು ತೆರೆದಿಡುತ್ತದೆಂದು ಯ‌ೂನಿಸೆಫ್ ತಿಳಿಸಿದ್ದು, ವಿಶೇಷವಾಗಿ ಮಕ್ಕಳಿಗೆ ಹೋರಾಟದಿಂದ ರಕ್ಷಣೆ ನೀಡುವಂತೆ ತಾವು ಸರ್ಕಾರಕ್ಕೆ ಮತ್ತು ಎಲ್‌ಟಿಟಿಇಗೆ ಪದೇ ಪದೇ ಒತ್ತಾಯಿಸಿದ್ದೆವೆಂದು ಯ‌ೂನಿಸೆಫ್ ಹೇಳಿದೆ.

2003ರಿಂದ 2008ರ ಅವಧಿಯಲ್ಲಿ ಎಲ್‌ಟಿಟಿಇ ಸುಮಾರು 6000 ಮಕ್ಕಳನ್ನು ನೇಮಿಸಿಕೊಂಡಿದೆ ಎಂದು ಅದು ತಿಳಿಸಿದೆ. ಮಕ್ಕಳನ್ನು ಸೈನ್ಯಕ್ಕೆ ಬಳಸಿಕೊಳ್ಳುವ ಮ‌ೂಲಕ ದೈಹಿಕ ದೌರ್ಜನ್ಯ, ಆಘಾತಕಾರಿ ಘಟನೆಗಳಿಂದ ಅವರ ಮನಸ್ಸಿಗುಂಟಾದ ಗಾಯ ಮಾಸುವುದು ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಫ್ಘಾನಿಸ್ತಾನ್: 50 ಮಿ.ಡಾಲರ್ ಮೌಲ್ಯದ ಹೆರಾಯಿನ್ ವಶ
ಇಸ್ರೇಲ್: ಐದು ಟನ್ ಬಾಂಬ್ ನಾಪತ್ತೆ
'ಶಾಂತಿ' ಬಳಿಕ ಶರಿಯತ್ ಕಾನೂನು ಜಾರಿ: ಜರ್ದಾರಿ
ಅಫ್ಘಾನ್: ಹೆಚ್ಚುವರಿ ಸೇನೆ ರವಾನೆಗೆ ಒಬಾಮ ಗ್ರೀನ್ ಸಿಗ್ನಲ್
ಭಾರತದ ಮೇಲೆ ದಾಳಿಗೆ ತಾಲಿಬಾನ್ ಸಂಚು
ಪಾಕ್ ಗಡಿಯಲ್ಲಿ ತಲೆಮರೆಸಿಕೊಂಡಿರುವ ಲಾಡೆನ್?