ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಸಬ್ ಒಪ್ಪಿಸಲು ಕೋರಿಯೇ ಇಲ್ಲವೆಂದಿತು ಪಾಕ್‌ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಸಬ್ ಒಪ್ಪಿಸಲು ಕೋರಿಯೇ ಇಲ್ಲವೆಂದಿತು ಪಾಕ್‌ !
ಪಾಕಿಸ್ತಾನ ಹಳೇ 'ನಿರಾಕರಣೆ' ಚಾಳಿಯ ಹಳಿಗೆ ಮತ್ತೆ ಮರಳಿದೆ. ಮುಂಬಯಿ ದಾಳಿ ಪ್ರಕರಣದಲ್ಲಿ ಬಂಧಿತನಾಗಿರುವ ಏಕೈಕ ಪಾಕಿಸ್ತಾನಿ ಉಗ್ರಗಾಮಿ ಅಜ್ಮಲ್ ಅಮೀರ್ ಕಸಬ್‌ನನ್ನು ನಮ್ಮ ವಶಕ್ಕೊಪ್ಪಿಸಿ, ಅವನನ್ನು ನಾವು ಪಾಕ್ ನೆಲದ ಕಾನೂನಿನಲ್ಲಿ ವಿಚಾರಣೆಗೆ ಗುರಿಪಡಿಸುತ್ತೇವೆ ಎಂದು ಬುಧವಾರ ಅಲ್ಲಿನ ನ್ಯಾಯಾಂಗ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ ಬೆನ್ನಿಗೇ, ಅದೇ ಪಾಕಿಸ್ತಾನದಿಂದ ನಿರಾಕರಣೆ ಹೇಳಿಕೆ ಬಂದಿದೆ.

ತನ್ನ ನೆಲದಲ್ಲಿರುವ ಇತರ ಬಂಧಿತ 'ಶಂಕಿತರ'ನ್ನು ಶಿಕ್ಷೆಗೆ ಗುರಿಪಡಿಸುವ ನಿಟ್ಟಿನಲ್ಲಿ ಮುಂಬಯಿ ದಾಳಿಯ ಪ್ರಧಾನ 'ಶಂಕಿತ' ಎಂದು ಗುರುತಿಸಿರುವ ಕಸಬ್‌ನನ್ನು ಒಪ್ಪಿಸಲು ಮತ್ತು ಆತ ಪ್ರಧಾನ ಶಂಕಿತ ಆಗಿದ್ದು, ಬಂಧಿತ ಇತರರೆಲ್ಲರೂ ಆತನಿಗೆ ಸಹಕಾರವಷ್ಟೇ ನೀಡಿದ್ದರಿಂದ ಪಾಕಿಸ್ತಾನದಲ್ಲಿರುವ ಸರಕಾರವು ಭಾರತ ಸರಕಾರಕ್ಕೆ ಮನವಿ ಸಲ್ಲಿಸಿದೆ ಎಂದು ಪಾಕ್ ಸಹಾಯಕ ಅಟಾರ್ನಿ ಜನರಲ್ ಸರ್ದಾರ್ ಮೊಹಮ್ಮದ್ ಗಾಜಿ ಹೇಳಿಕೆ ನೀಡಿದ್ದರು.

ಪಾಕಿಸ್ತಾನವು ಈ ಕುರಿತು ಔಪಚಾರಿಕವಾಗಿ ಭಾರತಕ್ಕೆ ಯಾವುದೇ ರೀತಿಯ ಮನವಿ ಸಲ್ಲಿಸಿಲ್ಲ ಎಂದು ವಿದೇಶಾಂಗ ಕಾರ್ಯಾಲಯ ವಕ್ತಾರ ಅಬ್ದುಲ್ ಬಾಸಿತ್ ಅವರು ತುರ್ತು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಕಸಬ್‌ನನ್ನು ಪಾಕಿಸ್ತಾನದ ವಶಕ್ಕೊಪ್ಪಿಸದಿದ್ದರೆ, ಇತರ ಶಂಕಿತರನ್ನು ಶಿಕ್ಷೆಗೆ ಗುರಿಪಡಿಸುವುದು ಕಷ್ಟವಾಗುತ್ತದೆ ಎಂದು ಮುಂಬಯಿ ದಾಳಿಗಳಿಗೆ ಸಂಬಂಧಿಸಿ ಪಾಕಿಸ್ತಾನಿ ಶಂಕಿತರ ವಿಚಾರಣೆಗಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿರುವ ಗಾಜಿ ಹೇಳಿಕೆ ನೀಡಿದ ಗಂಟೆಗಳೊಳಗೆ ಈ ನಿರಾಕರಣೆ ಹೇಳಿಕೆ ಹೊರಬಿದ್ದಿದೆ.

ಎರಡುವರೆ ತಿಂಗಳ ಕಾಲ ನಿರಾಕರಿಸುತ್ತಲೇ ಬಂದಿದ್ದ ಪಾಕಿಸ್ತಾನ, ಕೊನೆಗೂ ಇತ್ತೀಚೆಗೆ ಮುಂಬಯಿ ದಾಳಿ ಸಂಚು ತನ್ನ ನೆಲದಲ್ಲಿ ರೂಪಿಸಲಾಗಿತ್ತು ಮತ್ತು ಕಸಬ್ ಪಾಕಿಸ್ತಾನಿ ಪ್ರಜೆ ಎಂದು ಒಪ್ಪಿಕೊಂಡಿತ್ತು. ಆ ಬಳಿಕ ಲಷ್ಕರ್ ಇ ತೋಯ್ಬಾ ಕಮಾಂಡರ್, ಪ್ರಮುಖ ಸೂತ್ರದಾರಿ ಎಂದು ಭಾರತ ಆರೋಪಿಸಿರುವ ಝಕಿ ಉರ್ ರಹಮಾನ್ ಲಖ್ವಿ, ಅದರ ಸಂವಹನ ತಜ್ಞ ಜರಾರ್ ಶಾ ಸೇರಿದಂತೆ ಆರು ಮಂದಿ ಶಂಕಿತರನ್ನು ವಶಕ್ಕೆ ಪಡೆದಿರುವುದಾಗಿ ಪಾಕಿಸ್ತಾನ ಹೇಳಿದ್ದರೂ, ಅವರೆಲ್ಲ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬುದಿನ್ನೂ ನಿಗೂಢವಾಗಿಯೇ ಇದೆ. ಬಂಧಿತರಲ್ಲೊಬ್ಬ ಲಷ್ಕರ್ ಕಾರ್ಯಕರ್ತ ಹಮದ್ ಅಮೀನ್ ಸಾದಿಕ್‌ನನ್ನು ಮಾತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಸ್ಟಡಿ ವಿಧಿಸಲಾಗಿತ್ತು.

ಭಾರತದಲ್ಲಿ ಕೂಡ ಸಾಕಷ್ಟು ಶಂಕಿತರಿದ್ದಾರೆ ಎಂದು ಭಾರತ ಸರಕಾರವು ನಮಗೆ ತಿಳಿಸಿದೆ. ಭಾರತ ಯಾವೆಲ್ಲಾ ಸಾಕ್ಷ್ಯಾಧಾರಗಳನ್ನು ನೀಡುತ್ತದೆ ಎಂಬುದನ್ನು ಪರಿಶೀಲಿಸಿ, ನಾವು ಶಂಕಿತರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಗಾಜಿ ಇದೇ ಸಂದರ್ಭ ತಿಳಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶರಿಯತ್ ಜಾರಿ-ಪಾಕ್‌ನಿಂದ ವಿವರಣೆ ಬೇಕು: ಅಮೆರಿಕ
ಎಲ್‌ಟಿಟಿಇ ಕದನಕ್ಕೆ ಮಕ್ಕಳ ಬಳಕೆ: ಯ‌ೂನಿಸೆಫ್
ಅಫ್ಘಾನಿಸ್ತಾನ್: 50 ಮಿ.ಡಾಲರ್ ಮೌಲ್ಯದ ಹೆರಾಯಿನ್ ವಶ
ಇಸ್ರೇಲ್: ಐದು ಟನ್ ಬಾಂಬ್ ನಾಪತ್ತೆ
'ಶಾಂತಿ' ಬಳಿಕ ಶರಿಯತ್ ಕಾನೂನು ಜಾರಿ: ಜರ್ದಾರಿ
ಅಫ್ಘಾನ್: ಹೆಚ್ಚುವರಿ ಸೇನೆ ರವಾನೆಗೆ ಒಬಾಮ ಗ್ರೀನ್ ಸಿಗ್ನಲ್