ಶ್ರೀಲಂಕಾ ಪಡೆಗಳು ತಮಿಳು ಬಂಡುಕೋರರ ಪ್ರಮುಖ ನೆಲೆಯಾದ ಪುತ್ತುಕ್ಕುಡಿಯಿರುಪ್ಪು ಅನ್ನು ವಶಪಡಿಸಿಕೊಂಡಿದ್ದು, ಈ ಭೀಕರ ಕಾಳಗದಲ್ಲಿ 53ಎಲ್‌ಟಿಟಿಇ ಉಗ್ರರು ಸಾವನ್ನಪ್ಪಿದ್ದಾರೆ.
ಪುತ್ತುಕ್ಕುಡಿಯಿರುಪ್ಪು ಪಶ್ಚಿಮಭಾಗದಲ್ಲಿ ಈಗ ಶ್ರೀಲಂಕಾ ಸೇನೆ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಯುದ್ಧ ನೆಲೆಯಿಂದ ಬಂದ ವರದಿಗಳ ಪ್ರಕಾರ 28ಎಲ್‌ಟಿಟಿಇ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದು, ಗುರುವಾರ 14ದೇಹಗಳು ದೊರೆತಿರುವುದಾಗಿ ಹೇಳಿವೆ. ಈಗ ಸೇನೆ ಮತ್ತು ಬಂಡುಕೋರರ ನಡುವೆ ಪರಂತಾನ್ ಮತ್ತು ಮುಲ್ಲೈತೀವುನಲ್ಲಿ ಘರ್ಷಣೆ ಮುಂದುವರಿದಿದೆ.
ಈ ಸಂದರ್ಭದಲ್ಲಿ 11ಕ್ಕೂ ಹೆಚ್ಚು ನಾಗರಿಕರು ಎಲ್‌ಟಿಟಿಇ ನೆಲೆಯಿಂದ ತಪ್ಪಿಸಿಕೊಂಡು ಸುರಕ್ಷತಾ ನೆಲೆಗಳಿಗೆ ಬಂದಿವೆ, ಎಲ್‌ಟಿಟಿಇಯು ನಡೆಸುತ್ತಿರುವ ಗುಂಡಿನ ದಾಳಿಯ ನಡುವೆಯೂ ಶ್ರೀಲಂಕಾ ತಮಿಳು ನಾಗರಿಕರು ಸುರಕ್ಷತಾ ತಾಣಗಳತ್ತ ಧಾವಿಸುತ್ತಿದ್ದಾರೆ. |