ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಭಾರತೀಯರಿಗೆ ಆಸೀಸ್ ವರ್ತನೆಯ ಪಾಠ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯರಿಗೆ ಆಸೀಸ್ ವರ್ತನೆಯ ಪಾಠ!
ಆಸ್ಟ್ರೇಲಿಯಾದ ಮೆಲ್ಬರ್ನ್ ನಗರ ಪೊಲೀಸರು ಭಾರತೀಯ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಸ್ವರದಲ್ಲಿ ಮಾತೃಭಾಷೆಯಲ್ಲಿ ಮಾತನಾಡದಂತೆ ಎಚ್ಚರಿಕೆ ನೀಡಿದೆ. ಜತೆಗೆ ಐಪೋಡ್ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ರಾತ್ರಿಯ ರೈಲು ಪ್ರಯಾಣದಲ್ಲಿ ಉಪಯೋಗಿಸಬೇಡಿ ಎಂಬ ಸಲಹೆಯನ್ನೂ ನೀಡಿದೆ. ಇದಕ್ಕೆ ಕಾರಣ ಇತ್ತೀಚಿನ ದಿನಗಳಲ್ಲಿ ಇಲ್ಲಿ ಪದೇ ಪದೇ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆವ ದರೋಡೆ, ಸುಲಿಗೆ ಪ್ರಕರಣಗಳು.

ಕೇವಲ ಕಳೆದ ಹಣಕಾಸು ವರ್ಷವೊಂದರಲ್ಲಿ ಪಶ್ಚಿಮ ಮೆಲ್ಬರ್ನ್ ವಲಯದಲ್ಲಿ ನಡೆದ ದರೋಡೆಗಳಲ್ಲಿ ಬಲಿಪಶುಗಳಾದ ಭಾರತೀಯರ ಪ್ರಮಾಣ ಶೇ.27ಕ್ಕೇರಿದೆ. ಅಪರಾತ್ರಿಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವಾಗ ಐಪೋಡ್ ಹಾಗೂ ಲ್ಯಾಪ್‌ಟಾಪ್ ಬಳಕೆ ಮಾಡುವ ಅಭ್ಯಾಸ ಭಾರತೀಯ ವಿದ್ಯಾರ್ಥಿಗಳದ್ದು. ಹೀಗಾಗಿ ದರೋಡೆಕೋರರಿಗೆ ಭಾರತೀಯ ವಿದ್ಯಾರ್ಥಿಗಳು ಸುಲಭ ಟಾರ್ಗೆಟ್‌ಗಳಾಗುತ್ತಾರೆ ಎಂಬುದು ಪೊಲೀಸ್ ಲೆಕ್ಕಾಚಾರ.

ಇನ್ಸ್‌ಪೆಕ್ಟರ್ ಸ್ಕಾಟ್ ಮಹೋನಿ ಹೇಳುವಂತೆ, ದರೋಡೆಕೋರರಿಗೆ ಸುಲಭದ ತುತ್ತಾಗುವುದು ಭಾರತೀಯರು. ಇದಕ್ಕೆ ಕಾರಣ ಭಾರತೀಯ ಮುಖಚಹರೆಯೂ ಇರಬಹುದು. ಜತೆಗೆ ತಮ್ಮವರೊಂದಿಗೆ ದೊಡ್ಡ ಸ್ವರದಲ್ಲಿ ಮಾತೃಭಾಷೆಯಲ್ಲಿ ಮಾತನಾಡುವುದು, ಬೆಲೆಬಾಲುವ ವಸ್ತುಗಳನ್ನು ನಿರ್ಭಿಡೆಯಿಂದ ಎಲ್ಲೆಂದರಲ್ಲಿ ಅಪರಾತ್ರಿಯಲ್ಲಿ ಬಳಸುವುದು ದರೋಡೆಕೋರರನ್ನು ಪ್ರಚೋದಿಸಿದಂತಾಗುತ್ತದೆ ಎನ್ನುತ್ತಾರೆ.

ದಿ ಫೆಡರೇಷನ್ ಆಫ್ ಇಂಡಿಯನ್ ಸ್ಟೂಡೆಂಟ್ಸ್ ಆಫ್ ಆಸ್ಟ್ರೇಲಿಯಾ ಸಂಘಟನೆಯ ದಾಖಲೆಗಳ ಪ್ರಕಾರ, ಮೆಲ್ಬರ್ನ್‌ನಲ್ಲಿ 33 ಸಾವಿರ ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಈಗಾಗಲೇ ಭಾರತೀಯರ ಮೇಲೆ ನಡೆದ ಹಲ್ಲೆ, ದರೋಡೆ ಪ್ರಕರಣಗಳನ್ನು ವಿರೋಧಿಸಿ ಭಾರತೀಯ ವಿದ್ಯಾರ್ಥಿಗಳ ಪ್ರತಿಭಟನೆಯೂ ನಡೆದಿತ್ತು. ಅದೇ ಸಂದರ್ಭ, ಅಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ಇಂತಹ ಪ್ರಕರಣಗಳಿಂದ ಬಚಾವಾಗುವ ಬಗೆಯ ಕುರಿತು ತರಬೇತಿ ನಡೆದಿತ್ತು ಎನ್ನುತ್ತಾರೆ ಪ್ರತಿಭಟನೆ ನೇತೃತ್ವ ವಹಿಸಿದ್ದ ದಯಜೋತ್ ಸಿಂಗ್.

ಭಾರತದಲ್ಲಿ ಸಾರ್ವಜನಿಕ ಸ್ಥಳದಲ್ಲಿ ದೊಡ್ಡ ಸ್ವರದಲ್ಲಿ ಮಾತನಾಡಿದರೆ ಏನೂ ಆಗುವುದಿಲ್ಲ. ನಮ್ಮಲ್ಲಿ ಅದು ಅಪರಾಧವಲ್ಲ. ಆದರೆ ಆಸ್ಟ್ರೇಲಿಯಾ ಹಾಗಲ್ಲ. ಇದಕ್ಕೆ ಬೇರೆಯದೇ ಆದ ಸಂಸ್ಕೃತಿಯಿದೆ. ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದೊಡ್ಡ ಸ್ವರದಲ್ಲಿ ಮಾತನಾಡಿದರೆ ಅದನ್ನು ಅಪರಾಧದಂತೆ ನೋಡುತ್ತಾರೆ. ಇಲ್ಲಿ ಯಾರೂ ಪ್ರಯಾಣದ ವೇಳೆ ದೊಡ್ಡ ಸ್ವರದಲ್ಲಿ ಮಾತನಾಡುವುದಿಲ್ಲ. ಆದರೆ ಅಭ್ಯಾಸ ಬಲದಿಂದ ಭಾರತೀಯರು ದೊಡ್ಡ ಸ್ವರದಲ್ಲಿ ಮಾತನಾಡಿದರೆ ಸಾಕು, ಸುಲಭವಾಗಿ ಹಲ್ಲೆ, ದರೋಡೆಗಳಿಗೆ ಸುಲಭವಾಗಿ ತುತ್ತಾಗಬೇಕಾಗುತ್ತದೆ ಎನ್ನುತ್ತಾರೆ ದಯಜೋತ್ ಸಿಂಗ್.

ಇಂತಹ ಅಪರಾಧಗಳ ತಡೆಗೆ ಪೋಲೀಸರ ಎಲ್ಲ ಪ್ರಯತ್ನಗಳೂ ನೀರಿನಲ್ಲಿ ಮಾಡಿದ ಹೋಮದಂತಾಗಿದೆ ಎಂಬುದೇ ಈಗ ಆಸ್ಟ್ರೇಲಿಯಾ ಪೋಲೀಸರ ಬೇಸರ.

ದರೋಡೆಕೋರರ ದಾಳಿಗೆ ತುತ್ತಾದ ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ರಿಕಿ ಅಹ್ಲುವಾಲಿಯಾ ಹೇಳುವಂತೆ, ಇಲ್ಲಿ ತುಂಬ ಜನಾಂಗೀಯ ಬೇಧಭಾವವಿದೆ. ನನ್ನ ಬಹುತೇಕ ಭಾರತೀಯ ಮಿತ್ರರಿಗೂ ನನ್ನಂತಹುದೇ ಅನುಭವವಾಗಿದೆ. ಇಲ್ಲಿರುವ ಇತರ ವಿದೇಶೀಯರು, ಏಷ್ಯಾದವರಿಗೆ ಈ ಅನುಭವವಾಗುವುದಿಲ್ಲ. ಯಾಕೆ ಇಲ್ಲಿ ಭಾರತೀಯರನ್ನೇ ಟಾರ್ಗೆಟ್ ಮಾಡುತ್ತಾರೆ ಅನ್ನೋದು ತಿಳಿಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಕೇವಲ ಭಾರತೀಯ ವಿದ್ಯಾರ್ಥಿಗಳು ಮಾತ್ರವಲ್ಲ. ಭಾರತೀಯ ಮೂಲದ ಆಸ್ಟ್ರೇಲಿಯಾ ನಿವಾಸಿಗಳ ಮೇಲೂ ಹಲ್ಲೆ ನಡೆಯುತ್ತಿದೆ. ಟ್ಯಾಕ್ಸಿ ಚಾಲಕರಾಗಿರುವ ಭಾರತೀಯ ಜಲ್ವಿಂದರ್ ಸಿಂಗ್ ಅವರನ್ನು ತಿವಿದು ಗಾಯಗೊಳಿಸಿದ್ದು, ಕಳೆದ ವರ್ಷ ನಡೆದ ಆಸ್ಟ್ರೇಲಿಯಾ ಮೆಡಿಕಲ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಮುಖೇಶ್ ಹೇಕರ್ವಾಲ್ ಮೇಲಿನ ಹಲ್ಲೆ ಪ್ರಕರಣಗಳೂ ಇದಕ್ಕೆ ಸಾಕ್ಷಿಯಾಗುತ್ತವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂಬಯಿ ಸಂಚುಕೋರರ ಪಟ್ಟಿಯಲ್ಲಿ 320 ಕೇಂದ್ರಗಳು!
ಪಾಕ್ ಉಗ್ರರ ಸ್ವರ್ಗ: ಹಿಲರಿ ಕ್ಲಿಂಟನ್
ಮುಂಬೈ ದಾಳಿಗೆ ತನ್ನ ನೆಲ ಬಳಸಿರುವ ಸಾಧ್ಯತೆ: ಬಾಂಗ್ಲಾ
ಲಖ್ವಿ ಪೊಲೀಸ್ ಕಸ್ಟಡಿಗೆ
ಬಾಂಗ್ಲಾ: ದೋಣಿ ಮಗುಚಿ 12 ಸಾವು
ಶ್ರೀಲಂಕಾ: ಎಲ್‌ಟಿಟಿಇ ಮತ್ತೊಂದು ನೆಲೆ ವಶ