ಅಮೆರಿಕ ದೇಶದ ನಂಬರ್ 1 ಹೀರೋ ಯಾರು ಎಂಬ ಕುರಿತು 'ಹ್ಯಾರಿಸ್' ನಡೆಸಿದ ಸಮೀಕ್ಷೆಯಲ್ಲಿ ಬರಾಕ್ ಒಬಾಮ ಅವರು ಯೇಸು ಕ್ರಿಸ್ತನನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ್ದಾರೆ.
ಮತದಾನ ಆಧರಿಸಿ ಮಾಡಿದ ಈ ಸಮೀಕ್ಷೆಯಲ್ಲಿ ಒಬಾಮ ನಂ.1, ಯೇಸು ಕ್ರಿಸ್ತ ನಂ.2 ಹಾಗೂ ಮಾರ್ಟಿನ್ ಲೂಥರ್ ಕಿಂಗ್ ನಂ.3ನೇ ಸ್ಥಾನ ಪಡೆದಿದ್ದಾರೆ. ರೊನಾಲ್ಡ್ ರೇಗನ್ ಮತ್ತು ಜಾರ್ಜ್ ಡಬ್ಲ್ಯು. ಬುಷ್ ಅವರು ಅನುಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.
ನಂತರದ ಸ್ಥಾನಗಳಲ್ಲಿ ಅನುಕ್ರಮವಾಗಿ ಅಬ್ರಹಾಂ ಲಿಂಕನ್, ಜಾನ್ ಮೆಕೇನ್, ಜಾನ್ ಎಫ್.ಕೆನಡಿ, ಚೆಸ್ಲಿ ಸುಲೆನ್‌ಬರ್ಗರ್, ಮತ್ತು ಮದರ್ ತೆರೇಸಾ ಇದ್ದಾರೆ.
ಈ ಕುರಿತು ನಡೆಸಲಾದ ಆನ್‌ಲೈನ್ ಸಮೀಕ್ಷೆಯಲ್ಲಿ 2634 ಅಮೆರಿಕನ್ ಪೌರರು ಭಾಗವಹಿಸಿದ್ದರು ಎಂದು ಚಿಕಾಗೋ ಸನ್-ಟೈಮ್ಸ್ ವರದಿ ಮಾಡಿದೆ.
ಈ ಸಮೀಕ್ಷೆಯಲ್ಲಿ, ಯಾರನ್ನು ನೀವು ಹೀರೋಗಳೆಂದು ಪರಿಗಣಿಸುತ್ತೀರಿ ಎಂದಷ್ಟೇ ಕೇಳಲಾಗಿದ್ದು, ಆಯ್ಕೆಗೆ ಯಾವುದೇ ಪಟ್ಟಿ ನೀಡಲಾಗಿರಲಿಲ್ಲ ಎಂದು ಈ ವರದಿ ಹೇಳಿದೆ.
2001ರಲ್ಲಿ ನಡೆಸಿದ ಹ್ಯಾರಿಸ್ ಸಮೀಕ್ಷೆಯಲ್ಲಿ ಯೇಸು ಕ್ರಿಸ್ತ ನಂ.1 ಹೀರೋ ಆಗಿ ಮೂಡಿಬಂದಿದ್ದರೆ, ಬಳಿಕ ಮಾರ್ಟಿನ್ ಲೂಥರ್ ಕಿಂಗ್, ಕಾಲಿನ್ ಪೊವೆಲ್, ಜಾನ್ ಕೆನಡಿ ಮತ್ತು ಮದರ್ ತೆರೇಸಾ (5ನೇ ಸ್ಥಾನ) ಅವರಿದ್ದರು. ಆಗ ಬುಷ್‌ಗೆ 19ನೇ ಸ್ಥಾನವಿತ್ತು. |