ಆರ್ಥಿಕ ಬಿಕ್ಕಟ್ಟಿನಿಂದ ತೀವ್ರ ಒತ್ತಡದಲ್ಲಿರುವ ಪಾಕಿಸ್ತಾನದಲ್ಲಿ ಸುರಕ್ಷಿತ ಸ್ವರ್ಗವನ್ನು ಭಯೋತ್ಪಾದಕರು ಕಂಡುಕೊಂಡಿದ್ದಾರೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ತಿಳಿಸಿದ್ದಾರೆ.
ಆರ್ಥಿಕ ಬಿಕ್ಕಟ್ಟು ಭದ್ರತೆ ಮೇಲೆ ದೊಡ್ಡ ಬೆದರಿಕೆಯೊಡ್ಡಿದೆ ಎಂದು ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕರ ವಾದವನ್ನು ಹಿಲರಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು.
ಆರ್ಥಿಕ ಬಿಕ್ಕಟ್ಟನ್ನು ಬೆದರಿಕೆಯ ರೂಪದಲ್ಲಿ ಇಟ್ಟ ಸಂದರ್ಭವನ್ನು ತಾವು ಮೆಚ್ಚುವುದಾಗಿ ಹಿಲರಿ ತಿಳಿಸಿದರು. 'ಏಕೆಂದರೆ ಪಾಕಿಸ್ತಾನದ ಕಡೆ ನೋಡಿ, ದಕ್ಷಿಣ ಏಷ್ಯಾ ಮಾತ್ರವಲ್ಲದೇ ಅದಕ್ಕಿಂತ ಆಚೆ ರಾಷ್ಟ್ರಗಳ ಅನುಕೂಲಕ್ಕಾಗಿ ಪಾಕಿಸ್ತಾನದಲ್ಲಿ ಸ್ಥಿರತೆ ಸ್ಥಾಪಿಸಬೇಕಾಗಿದೆ' ಎಂದು ಹಿಲರಿ ಹೇಳಿದರು.
'ಪಾಕಿಸ್ತಾನದಲ್ಲೇ ಭಯೋತ್ಪಾದಕರು ಮತ್ತು ಮಿತ್ರರು ಸ್ವರ್ಗವನ್ನು ಕಂಡುಕೊಂಡಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಆರ್ಥಿಕತೆಯು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತೀವ್ರ ಒತ್ತಡದಲ್ಲಿದೆ' ಎಂದು ಅವರು ನುಡಿದರು. |