ರಾಜಧಾನಿಯ ಮೇಲೆ ಎಲ್‌ಟಿಟಿಇ ಕೈಗೊಂಡ ವಾಯುದಾಳಿಯ ಘಟನೆಯು ಬ್ಲಾಕ್ ಏರ್ ಟೈಗರ್ ದಳ ಕೈಗೊಂಡ ಆತ್ಮಾಹುತಿ ದಾಳಿಗಳು ಎಂದು ಎಲ್‌ಟಿಟಿಇ ತಿಳಿಸಿದೆ.
ಶುಕ್ರವಾರ ರಾತ್ರಿ ದಾಳಿ ಮಾಡಿದ ಎರಡು ಹಗುರ ವಿಮಾನಗಳ ಇಬ್ಬರು ಪೈಲಟ್‌ಗಳು ಬ್ಲಾಕ್ ಏರ್ ಟೈಗರ್ ಆತ್ಮಾಹುತಿ ದಳಕ್ಕೆ ಸೇರಿದವರು. ವಿಮಾನಗಳು ಶ್ರೀಲಂಕಾ ವಾಯುದಳದ ಕೇಂದ್ರ ಕಚೇರಿ ಮತ್ತು ಎಸ್‌ಎಲ್ಎಫ್ ನೆಲೆಗೆ ಶುಕ್ರವಾರ ರಾತ್ರಿ 9.15ಕ್ಕೆ ಅಪ್ಪಳಿಸಿ ಯಶಸ್ವಿ ದಾಳಿ ನಡೆಸಿತು ಎಂದು ಎಲ್‌ಟಿಟಿಇ ಪರ ವೆಬ್‌ಸೈಟ್ ಹೇಳಿದೆ.
ಆದಾಗ್ಯೂ ಶ್ರೀಲಂಕಾ ಸರ್ಕಾರ ಶುಕ್ರವಾರ ರಾತ್ರಿ ನೀಡಿದ ಹೇಳಿಕೆಯಲ್ಲಿ ಒಂದು ವಿಮಾನವನ್ನು ಹೊಡೆದುರುಳಿದ್ದಾಗಿ ಮತ್ತು ಎರಡನೇ ವಿಮಾನವನ್ನು ವಿಮಾನ ನಿರೋಧಕ ಗುಂಡಿನಿಂದ ನಿಷ್ಕ್ರಿಯಗೊಳಿಸಿದ್ದಾಗಿ ತಿಳಿಸಿದೆ.
ಒಂದು ವಿಮಾನದ ಪೈಲಟ್ ಕೂಡ ಮೃತನಾಗಿದ್ದಾನೆಂದು ಅದು ತಿಳಿಸಿದೆ. ಇಬ್ಬರು ಆತ್ಮಾಹುತಿ ಪೈಲಟ್‌ಗಳು ಎಲ್‌ಟಿಟಿಇ ವರಿಷ್ಠ ವೇಲುಪಿಳ್ಲೈ ಪ್ರಭಾಕರನ್ ಜತೆಯಲ್ಲಿ ನಿಂತಿರುವ ಛಾಯಾಚಿತ್ರವನ್ನು ಕೂಡ ವೆಬ್‌ಸೈಟ್ ಪ್ರಕಟಿಸಿದ್ದು, ಆತ್ಮಾಹುತಿ ಕಾರ್ಯಾಚರಣೆಗೆ ಧುಮುಕುವ ಸ್ವಲ್ಪ ಮುಂಚಿತವಾಗಿ ಈ ಛಾಯಾಚಿತ್ರಗಳನ್ನು ತೆಗೆದಿದ್ದೆಂದು ಹೇಳಲಾಗಿದೆ. |