ಉತ್ತರ ಚೀನಾದಲ್ಲಿ ಶಾನ್‌ಸಿ ಪ್ರಾಂತ್ಯದಲ್ಲಿ ಭಾನುವಾರ ಸಂಭವಿಸಿದ ಗಣಿ ಸ್ಫೋಟದಲ್ಲಿ ಕನಿಷ್ಟ 44 ಮಂದಿ ಸಾವನ್ನಪ್ಪಿದ್ದಾರೆಂದು ಕ್ಸಿನ್‌ಹುವಾ ಪತ್ರಿಕಾ ಏಜೆನ್ಸಿ ವರದಿ ಮಾಡಿದೆ.
ಉತ್ತರ ಚೀನಾದ ಟುನ್‌ಲಾನ್ ಗಣಿ ಕಂಪನಿಯಲ್ಲಿ ಬೆಳಗಿನ ಜಾವ 2 ಗಂಟೆಗೆ ಅನಿಲ ಸ್ಫೋಟ ಸಂಭವಿಸಿದ್ದು, ಸ್ಫೋಟದ ಸಮಯದಲ್ಲಿ 436 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು. ಇದರಲ್ಲಿ 340 ಮಂದಿಯನ್ನು ರಕ್ಷಿಸಲಾಗಿದೆ ಎಂದು ಪತ್ರಿಕಾ ವರದಿ ತಿಳಿಸಿದೆ.
ಚೀನಾದಲ್ಲಿ ಸುರಕ್ಷತೆಯ ಕೊರೆತೆಯಿಂದಾಗಿ ವರ್ಷದಲ್ಲಿ ಅನೇಕ ಆಘಾತಕಾರಿ ಘಟನೆಗಳು ನಡೆಯುತ್ತಿರುವುದರೊಂದಿಗೆ, ಚೀನಾದ ಗಣಿ ಉದ್ಯಮವು ಜಗತ್ತಿನ ಅತಿ ಅಪಾಯಕಾರಿ ಉದ್ಯಮವೆಂದು ಪರಿಗಣನೆಗೊಳಪಡುತ್ತಿದೆ.
ಕಳೆದ ವರ್ಷ ಚೀನಾದಲ್ಲಿ ಸಂಭವಿಸಿದ್ದ ಗಣಿ ಸ್ಫೋಟದಲ್ಲಿ ಸುಮಾರು 3,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
|