ಕೊಲಂಬೊದಲ್ಲಿ ನಡೆದ ವೈಮಾನಿಕ ದಾಳಿ ಆತ್ಮಾಹುತಿ ದಾಳಿಯಾಗಿದೆ. ಬ್ಲ್ಯಾಕ್ ಏರ್ ಟೈಗರ್ ವಿಭಾಗಕ್ಕೆ ಸೇರಿದ ಆತ್ಮಾಹುತಿ ತಂಡದ ಸದಸ್ಯರು ವೈಮಾನಿಕ ದಾಳಿ ನಡೆಸಿದ್ದಾರೆ ಎಂದು ಎಲ್‌ಟಿಟಿಇ ಮಾಧ್ಯಮಗಳಿಗೆ ವಿವರಣೆಯನ್ನು ನೀಡಿದೆ.
ವೈಮಾನಿಕ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ 54 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.
ಕೊಲಂಬೊದಲ್ಲಿರುವ ಶ್ರೀಲಂಕಾ ವಾಯುದಳದ ಕೇಂದ್ರ ಕಚೇರಿಯನ್ನು ಗುರಿಯಾಗಿಸಿಕೊಂಡು ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಯಶಸ್ವಿ ವೈಮಾನಿಕ ದಾಳಿ ನಡೆಯಲಾಯಿತು ಎಂದು ಎಲ್‌ಟಿಟಿಇ ಬೆಂಬಲಿತ ವೆಬ್‌ಸೈಟ್ ವರದಿ ಮಾಡಿದೆ.
ಆದರೆ ಶ್ರೀಲಂಕಾ ಸರಕಾರ ತಮಿಳು ಉಗ್ರರ ಒಂದು ವಿಮಾನವನ್ನು ಹೊಡೆದುರುಳಿಸಿದ್ದು, ಮತ್ತೊಂದು ವಿಮಾನವನ್ನು ಜಖಂಗೊಳಿಸಿ ಪೈಲಟ್‌ನನ್ನು ಹತ್ಯೆಮಾಡಲಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿತ್ತು. |